Breaking Newsಚಿಕ್ಕಮಗಳೂರುಜಿಲ್ಲಾ ಸುದ್ದಿ
ಸಿಎಂ ಬದಲಾವಣೆ, ಅರುಣ್ ಸಿಂಗ್ ವರದಿ ಎಲ್ಲಾ ಶುದ್ಧ ಸುಳ್ಳು: ಸಿ ಟಿ ರವಿ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಅರುಣ್ ಸಿಂಗ್ ವರದಿ ಕೊಟ್ಟಿದ್ದಾರೆ ಎಂದೆಲ್ಲಾ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನೇ ಮಾಧ್ಯಮಗಳು ಬಿಂಬಿಸಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರುಣ್ ಸಿಂಗ್ ಮೂರು ದಿನ ಕೇಂದ್ರದಲ್ಲೇ ಇಲ್ಲ. ಯಾರೋ ಷಡ್ಯಂತ್ರ ನಡೆಸಿ, ಇಂತಹ ಸುದ್ದಿಗಳನ್ನು ಹರಡುತ್ತಿದ್ದಾರೆ. ಅಪಪ್ರಚಾರದ ಸುದ್ದಿಯನ್ನೇ ಜೀವಂತ ಇಡುವ ಕೆಲಸ ಮಾಡಿ, ವಿನಾಕಾರಣ ಚರ್ಚೆಗೆ ಹುಟ್ಟು ಹಾಕುತ್ತಿದ್ದಾರೆ ಎಂದು ದೂರಿದರು.
