ಪೋನ್ ಟ್ಯಾಪ್ ದೂರು ವಾಪಸ್ ಇಲ್ಲ: ವದಂತಿ ಅಲ್ಲಗಳೆದ ಅರವಿಂದ ಬೆಲ್ಲದ

ಧಾರವಾಡ : ರಾಜ್ಯ ರಾಜಕಾರಣ ಸೇರಿದಂತೆ ರಾಜ್ಯ ಬಿಜೆಪಿಯಲ್ಲಿ ಸದ್ದು ಮಾಡಿದ ಶಾಸಕ ಅರವಿಂದ ಬೆಲ್ಲದ ಪೋನ್ ಕದ್ದಾಲಿಕೆ ಪ್ರಕರಣ ಕುರಿತಂತೆ, ಶಾಸಕರು ಈಗ ಮೌನ ಮುರಿದಿದ್ದಾರೆ. ಪೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಕೆಲವು ಮಾಧ್ಯಮಗಳಲ್ಲಿ, ಶಾಸಕರು ದೂರು ಹಿಂಪಡೆಯುತ್ತಾರೆ ಎಂಬ ಅರ್ಥದಲ್ಲಿ ಸುದ್ದಿಗಳನ್ನು ಪ್ರಕಟ ಮಾಡುತ್ತಿದ್ದು, ಅದು ಸತ್ಯಕ್ಕೆ ದೂರವಾದುದ್ದಾಗಿದೆ ಎಂದು ಶಾಸಕ ಅರವಿಂದ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಶಾಸಕ ಅರವಿಂದ ಬೆಲ್ಲದರವರು, ತಮ್ಮ ಸಮಾಜಿಕ ಜಾಲತಾಣದ ( ಫೇಸ್ಬುಕ್ ಪೇಜ್‌ನಲ್ಲಿ- ಟ್ವಿಟರ್) ಪೋಸ್ಟವೊಂದನ್ನು ಹಾಕಿ, ಪೋನ್ ಕದ್ದಾಲಿಕೆ ಆಗಿರುವುದರ ಕುರಿತು, ಗೃಹ ಇಲಾಖೆಗೆ ನೀಡಿದ ದೂರಿನ ಅನ್ವಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಅಲ್ಲದೆ ನಾನು ಕೂಡಾ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದು ಬರೆದುಕೊಂಡಿರುವ ಪೋಸ್ಟ ಹಾಕಿದ್ದಾರೆ.
ಅಲ್ಲದೆ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಮೂಲಕವೇ ಸಂಪೂರ್ಣ ಸತ್ಯ ಹೋರಬರಬೇಕು, ಹಾಗಾಗಿ ನೀಡಿದ ದೂತನ್ನು ಹಿಂಪಡೆಯುವ ಪ್ರಶ್ನೆ ಇಲ್ಲಾವೆಂದು ಶಾಸಕರು ತಮ್ಮ ಆಪ್ತರ ಬಳಿಯು ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಫೋನ್ ಟ್ಯಾಪ್ ಆಗಿರುವುದರ ಬಗ್ಗೆ ಗೃಹ ಇಲಾಖೆಗೆ ಸಲ್ಲಿಸಿದ್ದ ದೂರಿನನ್ವಯ ತನಿಖೆ ನಡೆಯುತ್ತಿದ್ದು,ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ
ಆದರೆ ಕೆಲವು ಮಾಧ್ಯಮಗಳಲ್ಲಿ ನಾನು ದೂರು ಹಿಂಪಡೆಯುತ್ತಿದ್ದೇನೆ ಎಂಬ ಸುದ್ದಿಗಳು ಪ್ರಕಟವಾಗುತ್ತಿರುವುದು ಗಮನಿಸಿದ್ದೇನೆ, ಅದು ಸತ್ಯಕ್ಕೆ ದೂರವಾದದ್ದು.ಸಂಪೂರ್ಣ ತನಿಖೆಯಾಗಿ ಸತ್ಯ ಹೊರಬರಬೇಕಿದೆ.#Hubli
— Arvind Bellad (@BelladArvind) June 23, 2021
ಅಲ್ಲದೆ ಈಗಾಗಲೇ ತನಿಖಾಧಿಕಾರಿಗಳು ಪ್ರಕರಣ ತನಿಖಯನ್ನು ಕೈಗೊಂಡಿದ್ದು, ಶಾಸಕರ ಹೇಳಿಕೆಯನ್ನು ಕೂಡಾ ಈ ಹಿಂದೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಿಂದ ಪರಪನ ಅಗ್ರಹಾರದಲ್ಲಿ ಇದ್ದ ಯುವರಾಜ್ ಸ್ವಾಮಿಯನ್ನು ಕೂಡಾ ಪೊಲೀಸ್ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದು, ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ಸಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಈಗ ಶಾಸಕ ಅರವಿಂದ ಬೆಲ್ಲದವರಿಗೆ ಹೇಳಿಕೆ ಪಡೆದಿಕೊಳ್ಳಲು ಮತ್ತೊಮ್ನೆ ನೋಡಿಸ್ ನೀಡಿದ್ದು, ಮುಂದೆ ಪ್ರಕರಣ ಮತ್ತೆ ಯಾವ ತೀರುವು ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಾಗಿದೆ.
