Breaking NewsLatestರಾಷ್ಟ್ರೀಯವಿದೇಶಸುದ್ದಿ
ಫ್ಲಾರಿಡಾದ ಪಾಮ್ ಬೀಚ್ನಲ್ಲಿರುವ ಮಾರ್-ಅ-ಲೋಗೋದಲ್ಲಿ ನವೆಂಬರ್ 15 ರಂದು ದೊಡ್ಡ ಘೋಷಣೆ: ಟ್ರಂಪ್

ಡೇಟನ್: ಮುಂದಿನ ವಾರ ‘ದೊಡ್ಡ ಘೋಷಣೆ’ ಮಾಡಲಿದ್ದೇನೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
‘ಫ್ಲಾರಿಡಾದ ಪಾಮ್ ಬೀಚ್ನಲ್ಲಿರುವ ಮಾರ್-ಅ-ಲೋಗೋದಲ್ಲಿ ನವೆಂಬರ್ 15 ರಂದು ದೊಡ್ಡ ಘೋಷಣೆಯೊಂದನ್ನು ಮಾಡುತ್ತೇನೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಒಹಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಬೆಂಬಲಿಗರ ಸಮ್ಮುಖದಲ್ಲಿ ಟ್ರಂಪ್ ಈ ಮಾತನ್ನು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಅವರ ಅಭಿಮಾನಿಗಳು ಹರ್ಷೋದ್ಘಾರ ಮೊಳಗಿಸಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಟ್ರಂಪ್ ಅವರು ಚುನಾವಣೆಯಲ್ಲಿ ಅಕ್ರಮ ಉಂಟಾಗಿದೆ ಎಂದು ತಕರಾರು ಎತ್ತಿದ್ದರು. ತಾನು ಈ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಇದೀಗ ‘ದೊಡ್ಡ ಘೋಷಣೆ’ ಮಾಡುತ್ತೇನೆ ಎಂದು ಹೇಳುವ ಮೂಲಕ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
