
ಲಖ್ನೋ: ಮಹತ್ವದ ರಾಜಕೀಯ ಬೆಳವಣಿಯಲ್ಲಿ ಉತ್ತರಪ್ರದೇಶದ ಗೋರಖ್ ಪುರ ವಿಧಾನಸಭಾ ಕೇತ್ರದಿಂದ ಭೀಮ್ ಸೇನೆಯ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕಣಕ್ಕಿಳಿಯಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಚಂದ್ರಶೇಖರ್ ಆಜಾದ್ ಹೇಳಿಕೊಂಡಿದ್ದಾರೆ.
ಕಳೆದವಾರ ಬಿಜೆಪಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರು ಕ್ಷೇತ್ರ ಗೋರಖ್ ಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಪ್ರಕಟವಾಗಿತ್ತು. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭಾ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
