ನಕಲಿ ದಾಖಲೆ ಸೃಷ್ಟಿಸಿ 1.35 ಕೋಟಿ ಬ್ಯಾಂಕಿಗೆ ವಂಚಿಸಿದ ಆರೋಪಿ ಬಂಧನ

ಕಲಬುರಗಿ: ದಶಕದ ಹಿಂದೆ ನಡೆದ ವಂಚನೆ ಪ್ರಕರಣ ಬೆನ್ನತ್ತಿದ್ದ ಸಿಬಿಐ ಪೋಲಿಸರು ಬ್ಯಾಂಕ್ ಗೆ ಸುಳ್ಳು ದಾಖಲಾತಿ ನೀಡಿ 1.35 ಕೋಟಿ ಸಾಲ ಪಡೆದು ಪಂಗನಾಮ ಹಾಕಿರುವ ವ್ಯಕ್ತಿ ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ನಗರದ ದರ್ಗಾ ಏರಿಯಾ ನಿವಾಸಿ ಅಹ್ಮದ್ ಎಂಬಾತನನ್ನು ಬೆಂಗಳೂರು ಎಸಿಬಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. 2009-10ರಲ್ಲಿ ಕಲಬುರಗಿ ನಗರದ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಬೀದಿ ಬದಿ ವರ್ತಕರು ಹಾಗೂ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವವರ ಹೆಸರಲ್ಲಿ ಸುಳ್ಳು ದಾಖಲೆ ಹುಟ್ಟು ಹಾಕಿ ಲಕ್ಷಾಂತರ ರುಪಾಯಿ ಸಾಲ ಪಡೆದಿದ್ದ ಎನ್ನಲಾಗಿದೆ. ಸದ್ಯ ಎಸಿಬಿ ಅಧಿಕಾರಿಗಳು, ಸಾಲದ ಹಗರಣದಲ್ಲಿ ಯಾರ್ಯಾರಿದ್ದಾರೆ, ಎಲ್ಲೆಲ್ಲಿ ದಾಖಲೆ ಹುಟ್ಟು ಹಾಕಲಾಗಿದ, ರಜಿಸ್ಟ್ರಾರ್ ಕಚೇರಿಯಲ್ಲಿನ ದಲ್ಲಾಳಿಗಳು ಸೇರಿದಂತೆ ಹಲವರ ವಿಚಾರಣೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಆಹ್ಮದ 2009ರಲ್ಲಿ ವರ್ತಕರು, ಕೆಲಸಗಾರರ ಹೆಸರಲ್ಲಿ ಖೊಟ್ಟ ದಾಖಲೆ ಬಳಸಿ 1.35 ಕೋಟಿ ರೂ ನಷ್ಟು ಸಾಲ ಪಡೆದಿದ್ದ. ಯಾರ ಹೆಸರಲ್ಲಿ ಸಾಲ ಪಡೆದಿದ್ದನೋ ಅವರಿಗೆ ಹಣ ನೀಡಿರಲಿಲ್ಲಾ ಹೀಗಾಗಿ ಬ್ಯಾಂಕ್ ನೋಟಿಸ್ ಬಂದ ಬಳಿಕವೆ ಅನೇಕರಿಗೆ ತಮ್ಮ ಹೆಸರಲ್ಲಿ ಸಾಲ ಇರೋ ಬಗ್ಗೆ ತಿಳಿದುಬಂದಿದೆ.
ಒಟ್ಟಿನಲ್ಲಿ ಸಣ್ಣಪುಟ್ಟ ವ್ಯಾಪಾರಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ವ್ಯಾಪಾರಿಗಳ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕಿನಲ್ಲಿ ಸಾಲ ಪಡೆದು ವಂಚಿಸಿದ ಆರೋಪಿಗೆ ಕೊನೆಗೂ ಸಿಬಿಐ ಅಧಿಕಾರಿಗಳು ಬಲೆ ಹಾಕಿದ್ದಾರೆ.
