Breaking NewsLatestಮೆಟ್ರೋರಾಜ್ಯಸುದ್ದಿ
ತೊಟ್ಟಿದ್ದ ದುಪ್ಪಟ್ಟಾವೇ (ವೇಲ್) ಸಾವಾಗಿ ಬಂದಿತ್ತು!

ಬೆಂಗಳೂರು: ನಗರದ ಚಂದ್ರಾ ಲೇಔಟ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಷಿನ್ ಗೆ ಯುವತಿ ದುಪ್ಪಟ್ಟಾ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಯುವತಿ ಶಾಜಿಯಾ ಬಾನು ಕೆಲಸ ಮಾಡುತ್ತಿದ್ದರು. ಈ ವೇಳೆ ಶಾಜಿಯಾ ಬಾನು ಅವರ ವೇಲ್ ಮಷಿನ್ ಗೆ ಸಿಲುಕಿ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಫ್ಯಾಕ್ಟರಿ ಸಿಬ್ಬಂದಿ ಶಾಜಿಯಾ ಬಾನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಶಾಜಿಯಾ ಬಾನು ಸಾವಿನ ಹಿನ್ನೆಲೆ ಫ್ಯಾಕ್ಟರಿ ಮಾಲೀಕನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿಗಳು ಫ್ಯಾಕ್ಟರಿ ಮಾಲೀಕರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
