Breaking NewsLatestಜಿಲ್ಲಾ ಸುದ್ದಿಬಾಗಲಕೋಟೆ

ಆರೋಗ್ಯ ಇಲಾಖೆ ಎಡವಟ್ಟು : 6 ತಿಂಗಳ ಹಿಂದೆ ಸತ್ತ ಮಹಿಳೆ ಹೆಸರಲ್ಲಿ ಕೋವಿಡ್ ಲಸಿಕೆ

ಬಾಗಲಕೋಟೆ : ದೇಶಾದ್ಯಂತ ಕೊರೊನಾ ವೈರಸ್ ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿದೆ. ಆದರೆ ಇಲ್ಲೊಂದು ಕಡೆ ಸತ್ತವರ ಹೆಸರಲ್ಲೂ ಸಹ ಲಸಿಕೆ ನೀಡಿರುವದು ಶಾಕ್ ತಂದಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಾಲಾ ಪ್ರಕಾಶ ಪಾವಟೆ ಕಳೆದ ಏಪ್ರಿಲ್ ೨೮ ರಂದೇ ಮೊದಲ ಡೋಸ್ ಪಡೆದ ನಂತರ ಮರಣ ಹೊಂದಿದ್ದಾರೆ. ಆಕೆ ಸತ್ತಿರುವ ಮರಣ ಪ್ರಮಾಣ ಪತ್ರವೂ ಕುಟುಂಬಸ್ಥರ ಬಳಿ ಇದೆ. ಇದೀಗ ಮಾಲಾ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಸೆ.8 ರಂದು ಮನೆಯವರ ಮೊಬೈಲ್‌ಗೆ ಮೆಸೇಜ್ ಜೊತೆಗೆ ಲಸಿಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ. ಇದನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ.

ಮಾಧ್ಯಮದವರಿಗೆ ಮರಣ ಪ್ರಮಾಣ ಪತ್ರವನ್ನು ತೋರಿಸಿ, ಇದು ಹೇಗೆ ಸಾಧ್ಯವೆಂಬುದೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಹಲವಾರು ಇಂತಹ ಘಟನೆಗಳು ನಡೆದಿವೆ. ಲಸಿಕೆಗೆ ಯಾವದೇ ಅಭಾವವಿಲ್ಲದಿದ್ದರೂ ಇಲ್ಲದೆ ಇರುವವರು ಲಸಿಕೆಯ ಫಲಾನುಭವಿಗಳಾಗುತ್ತಿರುವದು ಹೇಗೆ ಎಂಬ ಅನುಮಾನಗಳು ಕಾಡುತ್ತಿವೆ.

Spread the love

Related Articles

Leave a Reply

Your email address will not be published. Required fields are marked *

Back to top button