ಅರವಿಂದ್ ಸಿಎಂ ಆದ್ರೆ ತಂದೆಯಾಗಿ ಖುಷಿಯಾಗುತ್ತದೆ: ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್

ಧಾರವಾಡ : ಅರವಿಂದ ಬೆಲ್ಲದ್ರವರು ಮುಖ್ಯಮಂತ್ರಿ ಆಗಬೇಕು ಅನ್ನುವುದು ಕೇವಲ ನನ್ನ ಒಬ್ಬನ ಅಪೇಕ್ಷೆವಲ್ಲ. ಅದು ಅವನ ಕ್ಷೇತ್ರ ಸೇರಿದಂತೆ ಅರವಿಂದ ಅಭಿಮಾನಿಗಳ ಹಾಗೂ ಉತ್ತರ ಕರ್ನಾಟಕದ ಭಾಗದ ಜನತೆಯ ಅಪೇಕ್ಷವಾಗಿದೆ. ಅರವಿಂದ ಮುಖ್ಯಮಂತ್ರಿಯಾದರೆ ಒಬ್ಬತಂದೆಯಾಗಿ ಖುಷಿಯಾಗುತ್ತದೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಹೇಳಿದ್ದರು.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಿಮ್ಮ ಮಗ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಾಕಷ್ಟು ಜನ ಪೋನ್ ಕರೆ ಮಾಡುತ್ತಿದ್ದಾರೆ. ಅರವಿಂದನ ಅಭಿಮಾನಿಗಳು ಹಿತೈಷಿಗಳು ರಾಜ್ಯ ವ್ಯಾಪಿಯಿಂದ ದೂರವಾಣಿ ಕರೆ ಮಾಡುತ್ತಿದ್ದಾರೆ. ಹಾಗಾಗಿ ಅರವಿಂದನಿಗೆ ಸಿಎಂ ಸ್ಥಾನ ಒಲಿದು ಬಂದರೆ ಸಂತೋಷವಾಗುತ್ತದೆ. ನನ್ನ ಒಬ್ಬನಿಗೆಯಲ್ಲ ಮಾತ್ರವಲ್ಲ ಅವನು ಸಿಎಂ ಆಗಬೇಕು ಎಂದು ಅಪೇಕ್ಷೆ ಮಾಡುವ ಎಲ್ಲರಿಗೂ ಸಂತೋಷವಾಗುತ್ತದೆ ಎಂದರು.
ಈಗಾಗಲೇ ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಬಂದಿದು ಮುಂದಿನ ಮುಖ್ಯಮಂತ್ರಿ ಯಾರು ಆದರೆ ಉತ್ತಮ ಎಂಬ ಕುರಿತು ಶಾಸಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸರ್ವ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿ ಬಿಜೆಪಿ ವರಿಷ್ಠರಿಗೆ ತಿಳಿಸುತ್ತಾರೆ. ನಂತರ ಅದನ್ನು ಆಧರಿಸಿ ಸಿಎಂ ಆಯ್ಕೆಯನ್ನು ಬಿಜೆಪಿ ಹೈಕಮಾಂಡ್ ಮಾಡುತ್ತದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಹಳ ಗೌರವವಿದೆ. ದೇಶ ರಾಜ್ಯಗಳಲ್ಲಿ ಉತ್ತಮ ರಾಜಕೀಯ ನೀಡಬೇಕು ಎಂಬ ಅಪೇಕ್ಷೆವನ್ನು ಮೋದಿ ಹೊಂದಿದ್ದಾರೆ. ನಾವು ಕೂಡಾ ಅದರ ಅಪೇಕ್ಷ ಮೇಲೆ ರಾಜಕೀಯ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಧಾನಿಯಾಗಿ ಮೋದಿಯವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯವನ್ನು ಇಡೀ ದೇಶ ಸೇರಿದಂತೆ ರಾಜ್ಯಗಳು ಕೂಡಾ ಮೆಚ್ಚಿಕೊಂಡಿವೆ. ಕಳೆದ ನಾಲ್ಕೈದು ದಿನಗಳಿಂದ ರಾಜ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾನು ಕೂಡಾ ಮಾಧ್ಯಮಗಳ ಮೂಲಕವೇ ಗಮನಿಸುತ್ತಿದ್ದೇನೆ. ಅರವಿಂದ ಬೆಲ್ಲದ್ ಸೇರಿ ರಾಜ್ಯದ ಬೆಳವಣಿಗೆಯ ಕುರಿತು ಇದೂವರೆಗೂ ಯಾರು ನನ್ನ ಸಂಪರ್ಕ ಮಾಡಿಲ್ಲ. ನಾನು ಕೂಡಾ ಯಾರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ನಾನು ನಮ್ಮ ಅರವಿಂದನ ತಾಯಿ ಕುತ್ತುಕೊಂಡು ಸುದ್ದಿವಾಹಿನಗಳನ್ನು ನೋಡುತ್ತಾ ರಾಜ್ಯ ಬೆಳವಣಿಗೆ ಮಾಹಿತಿ ತಿಳಿದುಕೊಳ್ಳುತ್ತಿದ್ದೇನೆ. ನನ್ನ ಮಗನಿಂದ ಯಾವುದೇ ವಿಚಾರ ಗೊತ್ತಾಗಿಲ್ಲ ಎಂದು ಸ್ಪಷ್ಟಪಡಿಸಿದರು.
