Breaking NewsLatestಕಲಬುರ್ಗಿಜಿಲ್ಲಾ ಸುದ್ದಿ

ಹುಡುಗಿ ವಿಚಾರಕ್ಕೆ ಸ್ನೇಹಿತನ ಪ್ರಾಣ ತೆಗೆದ ಕಿರಾತಕರು ಅರೆಸ್ಟ್!

ಕಲಬುರಗಿ: ಎಮ್‌ಎಸ್‌ಕೆ ಮಿಲ್ ಬಡಾವಣೆಯಲ್ಲಿ ನಡೆದಿದ ಸೋಹೆಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಜಾಮಿಲ್ ಕುರೇಶಿ (20), ಜುನೇದ್ ಅಲಿ (22), ಮೊಹಮ್ಮದ್ ಆಯನ್ ಜಡ್ದಿ (20), ಅಬ್ರಾಬ್ ಹುಸೇನ್ (22) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸೋಹೆಲ್ ಹೋಟೆಲೊಂದರಲ್ಲಿ ಬಿರಿಯಾನಿ ತಿನ್ನುತ್ತ ಕುಳಿತ್ತಿದ್ದಾಗ ಆರೋಪಿಗಳು ಮೈಮೇಲೆ ಎರಗಿ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಂತಕರನ್ನು ಹೆಡೆಮೂರಿ ಕಟ್ಟಿದ್ದಾರೆ.

ಆರೋಪಿ ಮುಜಾಮಿಲ್‌ ಹಾಗೂ ಕೊಲೆಯಾದ ಸೋಹೆಲ್ ಸ್ನೇಹಿತರಾಗಿದ್ರು, ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡಾ ಇತ್ತು.‌ ಈ ನಡುವೆ ಮುಜಾಮಿಲ್ ಪ್ರೀತಿ ಮಾಡುತ್ತಿದ್ದ ಯುವತಿಯ ಮೇಲೆ ಸೋಹೆಲ್ ಕಣ್ಣು ಹಾಕಿದ್ದನಂತೆ. ಸೋಹೆಲ್ ಕೂಡಾ ಅದೆ ಯುವತಿಯನ್ನು ಪ್ರೀತಿ ಮಾಡತೊಡಗಿದ್ದನಂತೆ, ಇದರಿಂದಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮುಜಾಮಿಲ್ ತನ್ನ ಸಹಚರರೊಂದಿಗೆ ಸೇರಿ ಸೋಹೆಲ್ ಪ್ರಾಣ ತೆಗೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button