Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ಮಾವ ಮುಲಾಯಂ ಸಿಂಗ್ ಆಶೀರ್ವಾದ ಪಡೆದ ಅಪರ್ಣಾ ಯಾದವ್

ಲಖ್ನೋ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಸೇರಿದ್ದ ಸಮಾಜವಾದಿ ಪಕ್ಷದ ಹಿರಿಯ ನೇತಾರ ಮುಲಾಯಂ ಸಿಂಗ್ ಯಾದವ್ ಅವರ   ಸೊಸೆ,  ಅಪರ್ಣಾ ಯಾದವ್,  ಮಾವನನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಕುರಿತು ಅಪರ್ಣ  ಯಾದವ್ ಟ್ವೀಟ್ ಮಾಡಿದ್ದು, ಮಾವ ಮುಲಾಯಂಸಿಂಗ್  ಕಾಲಿಗೆ ಬೀಳುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ದೇಶವನ್ನು ಮತ್ತು  ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯತ್ನ ಮಾಡುತ್ತಿದ್ದು, ಅವರಿಗೆ ಸಾಥ್ ನೀಡಲು ಬಿಜೆಪಿ ಸೇರಿರುವುದಾಗಿ, ಇದಕ್ಕಾಗಿ ಮಾವನವರ  ಆಶೀರ್ವಾದ ಪಡೆದುಕೊಂಡಿರುವುದಾಗಿ ಅಪರ್ಣಾ ಯಾದವ್ ಟ್ವೀಟ್ ಮಾಡಿದ್ದಾರೆ.

 ಶುಕ್ರವಾರ ಮಾವ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ, ಅವರಿಗೆ ನಮಸ್ಕಾರ ಮಾಡಿ  ಆಶೀರ್ವಾದ ಪಡೆದುಕೊಂಡಿರುವುದಾಗಿ ಅಪರ್ಣಾ ಯಾದವ್ ಟ್ವೀಟ್ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button