Breaking NewsLatestವಿದೇಶಸುದ್ದಿ

Afghanistan: ತಾಲಿಬಾನ್ ಕಪಿಮುಷ್ಠಿಗೆ ಅಫ್ಘಾನಿಸ್ತಾನ: ವಿಮಾನದ ಎಂಜಿನ್ ಮೇಲೆ ಕೂತಿದ್ದ ಇಬ್ಬರ ದುರ್ಮರಣ

ಕಾಬೂಲ್: ತಾಲಿಬಾನ್ ಗಳ ಕಪಿಮುಷ್ಠಿಗೆ ಸಿಲುಕಿ ನಲುಗಿರುವ ಅಪ್ಘಾನಿಸ್ತಾನದಲ್ಲಿ ಜೀವನ ಮಾಡಲು ಜನರು ಭಯಭೀತರಾಗಿದ್ದಾರೆ. ದೇಶ ತೊರೆಯಲು ವಿಮಾನ ಹತ್ತಲು ಯತ್ನಿಸಿದ ಇಬ್ಬರು ವಿಮಾನ ಟೇಕ್ ಆಗುತ್ತಿದ್ದಂತೆ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ನೂಕು ನುಗ್ಗಲು ಉಂಟಾಗಿದೆ. ದೇಶ ತೊರೆಯಲು ಒಂದೇ ಬಾರಿ ಸಾವಿರಾರು ಜನರು ವಿಮಾನ ನಿಲ್ದಾಣಕ್ಕ ಬಂದ ವೇಳೆ ಜನ ಜಂಗುಳಿ ನಿಯಂತ್ರಿಸಲು ತಾಲಿಬಾನ್ ಗಳು ಗುಂಡಿನ ಮಳೆಗೈಯ್ದಿದ್ದಾರೆ. ಇದರಿಂದ ಐವರು ಸಾವನ್ನಪ್ಪಿದ್ದಾರೆ.

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಟೈಯರ್ ಹಿಡಿದು ಜನರು ಪ್ರಾಣ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಇಬ್ಬರು ಜಾರಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ತಾಲಿಬಾನ್ ಭಯೋತ್ಪಾದಕರು ಅಪ್ಘಾನಿಸ್ತಾನದ ಸಂಸತ್ ಭವನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಯಾರೂ ಕೂಡ ಭಯ ಪಡುವ ಆಗತ್ಯವಿಲ್ಲ. ಮಹಿಳೆಯರು ನಿರ್ಭೀತಿಯಿಂದ ಎಲ್ಲೆಂದರೆ ಇಲ್ಲಿ ಓಡಾಡಬಹುದು. ಮೊದಲಿನಂತೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ತಾಲಿಬಾನ್ ವಕ್ತಾರರು ಧೈರ್ಯ ತುಂಬಿದರೂ ಜನರು ಮಾತ್ರ ಭಯಭೀತರಾಗಿದ್ದಾರೆ.


ಕೆಲವರು ವಿಮಾನ ಹತ್ತಿದರೆ, ಮತ್ತೆ ಕೆಲವು ದ್ವಿಚಕ್ರ ವಾಹನ ಮತ್ತು ಕಾರು ಹತ್ತಿದ್ದಾರೆ. ಇನ್ನು ಕೆಲವರು ನಡಿಗೆಯಲ್ಲಿ ಅಕ್ಕ ಪಕ್ಕದ ದೇಶದಲ್ಲಿಹೋಗಿ ಸೇಫ್ ಆಗಲು ಪ್ರಯಾಸ ಮಾಡುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button