
ಕ್ಯೂ( ಉಕ್ರೇನ್ ರಾಜಧಾನಿ: ಉಕ್ರೇನ್ ನಲ್ಲಿ ಮುಂದುವರಿದ ಉದ್ವಿಗ್ನತೆಯ ದೃಷ್ಟಿಯಿಂದ ಅಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲ ಎಂದು ಪರಿಗಣಿಸಲ್ಪಟ್ಟಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎರಡನೇ ಬಾರಿ ಸೂಚನೆ ನೀಡಿದೆ.ಚಾರ್ಟರ್ ವಿಮಾನಗಳ ನವೀಕರಣಗಳಿಗಾಗಿ ಆಯಾ ವಿದ್ಯಾರ್ಥಿಗಳು, ಗುತ್ತಿಗೆದಾರರೊಂದಿಗೆ ಸಂಪರ್ಕದಲ್ಲಿರಲು ಭಾರತೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ. ಇದಕ್ಕೂ ಮೊದಲು ಇದೇ ರಾಯಭಾರಿ ಕಚೇರಿ ಇದೇ ಸಲಹೆಯನ್ನು ಉಕ್ರೇನ್ ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ನೀಡಿತ್ತು.
