Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ

ರಾಜಕೀಯ ನಾಯಕರಿಗೆ ಮದುವೆ ಆಮಂತ್ರಣ ನೀಡಿದ ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ನವೆಂಬರ್ 27ರಂದು ಯಶಸ್ವಿ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ’ ಎಂದು ಹಾಕಿಸಿಕೊಳ್ಳುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮೂಲತಃ ದಾವಣಗೆರೆಯವರಾದ ಅದಿತಿ ಪ್ರಭುದೇವ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ ಸಾಗರದಲ್ಲಿ ಯಶಸ್ವಿ ಅವರ ಜೊತೆ ವಿವಾಹವಾಗುತ್ತಿದ್ದು, ಆಮಂತ್ರಣ ಪತ್ರಿಕೆಗಳನ್ನು ರಾಜಕೀಯ ನಾಯಕರಿಗೆ ನೀಡಿ ವಿವಾಹಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಸತಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ ಅದಿತಿ ಪ್ರಭುದೇವ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button