ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರರಲ್ಲ: ನಟ ಚೇತನ್

ಬೆಂಗಳೂರು: ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಕುರಿತಾದ ಪಾಠಗಳನ್ನು ತೆಗೆಯಬೇಕು ಎಂಬ ಕುರಿತಾಗಿ ರಾಜ್ಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಟಿಪ್ಪು ಸುಲ್ತಾನ್ ಮತಾಂಧ, ಆತನ ಪಾಠವನ್ನು ವಿದ್ಯಾರ್ಥಿಗಳು ಕಲಿಯುವ ಅಗತ್ಯವಿಲ್ಲ ಎಂದು ಕೆಲ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಇದೀಗ ನಟ ಚೇತನ್ ಈ ವಿಚಾರದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮುಸ್ಲಿಂ ಆದ ಯಾವುದೇ ವ್ಯಕ್ತಿಯನ್ನ ಗುರಿಯಾಗಿಸುವುದರ ಮೂಲಕ ನಮ್ಮ ಇತಿಹಾಸಗಳನ್ನ ಹಿಂದುತ್ವಗೊಳಿಸುತ್ತಿದೆ. ಟಿಪ್ಪು ಅನ್ನು ಇನ್ನು ಮುಂದೆ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವಂತಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುತ್ತ ಯುದ್ಧ ಭೂಮಿಯಲ್ಲಿ ಮಡಿದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತಾದರೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ನಟ ಚೇತನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಚೇತನ್ ಅಭಿಪ್ರಾಯಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ರೆ ಮತ್ತೊಂದಷ್ಟು ಮಂದಿ ವಿರೋಧ ವ್ಯಕ್ತಡಿಸಿದ್ದಾರೆ. ಈ ಮಧ್ಯೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಳಿಕ ಕಳೆದ ನಾಲ್ಕೂವರೆ ವರ್ಷಗಳಿಂದ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಚೇತನ್ ಪೊಲೀಸ್ ಸ್ಟೇಷನ್ ಗೆ ಹೋಗಿ ಬಂದ ಬಳಿಕ ಹಿಂಪಡೆಯಲಾಗಿದೆ. ಇದೀಗ ನಟ ಚೇತನ್ ತಮಗೆ ನೀಡಿರುವ ಗನ್ ಮ್ಯಾನ್ ಭದ್ರತೆಯನ್ನು ಮತ್ತೆ ಕಲ್ಪಿಸುವಂತೆ ಕೋರಿ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ.
