Breaking NewsLatestರಾಷ್ಟ್ರೀಯಸುದ್ದಿ

ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತದ ಗೆಲುವು

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಹುಮತದ 126 ಸೀಟುಗಳನ್ನು ಗಳಿಸುವ ಮೂಲಕ ಆಮ್ ಆದ್ಮಿ ಪಕ್ಷ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಎಂಸಿಡಿ 250 ವಾರ್ಡ್‌ಗಳನ್ನು ಹೊಂದಿದ್ದು ಸರಳ ಬಹುಮತದ ಮಾರ್ಕ್ ಅಥವಾ ಮ್ಯಾಜಿಕ್ ನಂಬರ್ 126 ಆಗಿದೆ.

ಬೆಳಿಗ್ಗೆ 11:30 ಕ್ಕೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಎಎಪಿ 56 ಗೆಲುವುಗಳು ಮತ್ತು 77 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಮ್ಯಾಜಿಕ್ ಸಂಖ್ಯೆ 126 ಅನ್ನು ದಾಟಿದೆ. ಎಂಸಿಡಿ ಚುನಾವಣೆಯಲ್ಲಿ ಎಎಪಿ ಗೆಲುವಿಗಾಗಿ ಮನೀಶ್ ಸಿಸೋಡಿಯಾ ದೆಹಲಿಯ ಜನರಿಗೆ ಧನ್ಯವಾದ ಹೇಳಿದ್ದಾರೆ. ದೆಹಲಿ ಎಂಸಿಡಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ನಂಬಿದ್ದಕ್ಕಾಗಿ ದೆಹಲಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸುವ ಮೂಲಕ, ದೆಹಲಿಯ ಜನರು ಪ್ರಾಮಾಣಿಕ ಮತ್ತು ಕೆಲಸ ಮಾಡುವ ಅರವಿಂದ ಕೇಜ್ರಿವಾಲ್ ಅವರನ್ನು ಗೆಲ್ಲಿಸಿದ್ದಾರೆ. ನಮಗೆ ಇದು ಕೇವಲ ಗೆಲುವಲ್ಲ, ದೊಡ್ಡ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣೆ ಗೆುಲುವಿನ ಬಗ್ಗೆ ಟ್ವೀಟ್ ಮಾಡಿದ ರಾಘವ್ ಚಡ್ಡಾ, ಧನ್ಯವಾದಗಳು, ದೆಹಲಿ.ಎಂಸಿಡಿ ಚುನಾವಣೆಯಲ್ಲಿ ಎಎಪಿಯ ಗೆಲುವು ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವ ಮತ್ತು ದೃಷ್ಟಿಯಲ್ಲಿ ನಿಮ್ಮ ನಂಬಿಕೆಯ ಪ್ರತಿಬಿಂಬವಾಗಿದೆ.ತಮ್ಮ ನಿರಾಸಕ್ತಿ, ಸುಳ್ಳು ಮತ್ತು ಕೆಸರೆರಚಾಟದ ರಾಜಕೀಯದಿಂದ ದೆಹಲಿಯನ್ನು ನಾಶಮಾಡಲು ಯತ್ನಿಸಿದವರ ವಿರುದ್ಧ ಇದು ನಿಮ್ಮ ವಿಜಯವಾಗಿದೆ.ಸ್ವಚ್ಛವಾದ, ಹಸಿರಿನಿಂದ ಕೂಡಿದ ದೆಹಲಿ ಇಲ್ಲಿದೆ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button