Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಲಾಂಗ್ ಹಿಡಿದು ಕುಣಿದ ಯುವಕರ ವಿಡಿಯೋ ವೈರಲ್

ಬೆಂಗಳೂರು: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮೊಹಮ್ಮದ್ ಅವರ ಹುಟ್ಟು ಹಬ್ಬ ಮತ್ತು ಸಾವಿನ ದಿನದಂದು ಈದ್ ಮಿಲಾದ್ ಅಥವಾ ಈದ್ ಮಿಲಾದ್-ಉನ್-ನಬಿಯ ದಿನವಾಗಿ ಮುಸ್ಲೀಂಮರು ಆಚರಿಸುತ್ತಾರೆ.

ಈ ದಿನ ಕುರಾನ್ ಪಠಣೆ, ಪ್ರಾರ್ಥನೆ ಸಂಜೆ ಮೆರವಣಿಗೆಗಳನ್ನು ಮಾಡಲಾಗುತ್ತೆ. ಆದ್ರೆ ಬೆಂಗಳೂರಿನ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ವಾರ್ಡ್ ನಂಬರ್ 144 ಸಿದ್ದಾಪುರದಲ್ಲಿ ಹಬ್ಬದ ದಿನದಂದು ಯುವಕರು ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.

ಈದ್ ಮಿಲಾದ್ ಪ್ರಯುಕ್ತ ಆದ ಸಂಭ್ರಮಾಚರಣೆಯಲ್ಲಿ ಯುವಕರು ಲಾಂಗೂ, ಮಚ್ಚು ಹಿಡಿದು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಗೃಹ ಸಚಿವರೇ ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಈ ಸಣ್ಣ ಹುಡುಗರ ಕೈಗೆ ಲಾಂಗು ಮಚ್ಚು ಎಲ್ಲಿಂದ ಬಂತು? ಇಷ್ಟು ರಾಜರೋಷವಾಗಿ ನಡು ರೋಡಲ್ಲಿ ಲಾಂಗೂ ಮಚ್ಚು ಡ್ಯಾನ್ಸ್ ಮಾಡ್ತಿದ್ರು ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button