Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ
ಭಾರತದಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್ ನಿಂದಾಗಿ 66 ಮಕ್ಕಳು ಸಾವು: ಎನ್.ಆರ್. ನಾರಾಯಣಮೂರ್ತಿ

ಬೆಂಗಳೂರು: ಗ್ಯಾಂಬಿಯಾದಲ್ಲಿ ಭಾರತದಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್ನಿಂದಾಗಿ 66 ಮಕ್ಕಳು ಸಾವನ್ನಪ್ಪಿದ್ದು, ಇದು ದೇಶಕ್ಕೆ ಆದ ದೊಡ್ಡ ಅವಮಾನ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ. ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ವತಿಯಿಂದ ಆರು ಜನ ಗಣ್ಯರಿಗೆ ಇನ್ಫೋಸಿಸ್ ಪ್ರಶಸ್ತಿ ಘೋಷಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಮೂರ್ತಿ, ಭಾರತವು ಕೋವಿಡ್ ಉತ್ಪಾದಿಸುವ ಹಾಗೂ
ದೇಶದ ಜನರಿಗೆ ಲಸಿಕೆ ಹಾಕುವ ಸಾಧನೆಯನ್ನು ಸಾಧಿಸಿದ್ದರೂ ಸಹ ಸಂಶೋಧನಾ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದರು. 100 ಕೋಟಿ ಕೋವಿಡ್ 19 ಲಸಿಕೆಗಳನ್ನು ತಯಾರಿಸಿದ ಮತ್ತು ಸರಬರಾಜು ಮಾಡಿದ ಕಂಪನಿಗಳನ್ನು ಶ್ಲಾಘಿಸಿದ ಅವರು, ಇದು ಅದ್ಭುತ ಸಾಧನೆಯಾಗಿದೆ. ಅಲ್ಲದೇ, ಪ್ರೊಫೆಸರ್ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊರತಂದಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
