Breaking NewsLatestವಿದೇಶಸುದ್ದಿ
ಅಬುಧಾಬಿಯಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ಡ್ರೋನ್ ದಾಳಿ : ಮೂವರ ಸಾವು

ಅಬುಧಾಬಿ : ಇಲ್ಲಿಯ ರಾಷ್ಟ್ರೀಯ ತೈಲ ಕಂಪನಿಯ ಡಿಪೋಗಳ ಬಳಿ ಮೂರು ಇಂಧನ ಟ್ಯಾಂಕ್ ಗಳು ಸ್ಫೋಟಗೊಂಡು ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಎಮಿರಾಟಿ ಸರ್ಕಾರಿ ಸ್ವಾಮ್ಯದ ಕಂಪನಿ ಎಡಿಎನ್‌ಒಸಿಯ ಇಂಧನ ಉಗ್ರಾಣಗಳ ಬಳಿಯ ಮಿಸ್ಫಾ ಪ್ರದೇಶದಲ್ಲಿ ಇಂಧನ ಸಾಗಿಸುವ ಮೂರು ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿದೆ.
ಈ ದಾಳಿಯಲ್ಲಿ ಒಟ್ಟು ಮೂವರು ನಾಗಾರಿಕರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಭಾರತೀಯರಾಗಿದ್ರೆ, ಇನ್ನೊಬ್ಬ ಪಾಕಿಸ್ಥಾನ ಪ್ರಜೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ದಾಳಿಯ ಹೊಣೆಯನ್ನ ಇರಾನ್ ಬೆಂಬಲಿತ ಹೌತಿಸ್ ಹೊತ್ತಿದೆ.
