Breaking NewsLatestರಾಷ್ಟ್ರೀಯ
ಲಖೀಂಪುರ ರೈತರ ಹತ್ಯೆ; ಮಂತ್ರಿ ಪುತ್ರ ಆಶಿಶ್ ಮಿಶ್ರಾಗೆ ಮತ್ತೆ ಸಮನ್ಸ್

ಲಕ್ನೋ: ಖಲೀಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ಕೇಂದರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ ಮೊತ್ತೊಮ್ಮೆ ಉತ್ತರ ಪ್ರದೇಶ ಪೊಲೀಸರು ಸಮನ್ಸ್ ನೀಡಿದ್ದಾರೆ.
ನಿನ್ನೆ ಪೊಲೀಸರು ಸಮನ್ಸ್ ನೀಡಿದ್ದರೂ ವಿಚಾರಣೆಗೆ ಆಶಿಶ್ ಮಿಶ್ರಾ ಹಾಜರಾಗಿರಲಿಲ್ಲ. ನಾಲ್ವರು ರೈತರೂ ಸೇರಿದಂತೆ 8 ಮಂದಿಯೆ ಸಾವಿಗೆ ಕಾರಣವಾಗಿದ್ದ ಹಿಂಸಾಚಾರ ನಡೆದು ವಾರವೇ ಸಮೀಪಿಸುತ್ತಿದ್ದರೂ, ಕೊಲೆ ಕೇಸ್ ಆರೋಪಿ ಆಶಿಶ್ ಮಿಶ್ರಾನನ್ನು ಬಂಧಿಸದಿರುವ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಛೀಮಾರಿ ಹಾಕಿದೆ. ಆತ ಪೊಲೀಸ್ ವಿಚಾರಣೆಗೆ ಹಾಜರಾಗಬೇಕು, ಇಲ್ಲದಿದ್ದಲ್ಲಿ ಆತನನ್ನು ಬಂಧಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದಾದ ಬಳಿಕ ಇನ್ನೊಮ್ಮೆ ಆತನಿಗೆ ಸಮನ್ಸ್ ನೀಡಲಾಗಿದ್ದು, ನಾಳೆ ಬೆಳಗ್ಗೆ ಆತ ವಿಚಾರಣೆಗೆ ಹಾಜರಾಗಬೇಕಿದೆ.
