Breaking NewsLatestರಾಜ್ಯರಾಷ್ಟ್ರೀಯಸುದ್ದಿ
24 ಗಂಟೆಯಲ್ಲಿ 2.71 ಲಕ್ಷ ಹೊಸ ಕೋವಿಡ್ ಪ್ರಕರಣ ದಾಖಲು
ನವದೆಹಲಿ: ದೇಶದಲ್ಲಿ ಕಳೆದ ದಿನಗಳ 24 ಗಂಟೆಗಳಅವಧಿಯಲ್ಲಿ ಹೊಸದಾಗಿ 2, 71, 202 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶಾದ್ಯಂತ ಈವರೆಗೆ 7, 743 ಒಮಿಕ್ರೋನ್ ಪ್ರಕರಣಗಳು ಸಹ ವರದಿಯಾಗಿದೆ.
ದೇಶದಲ್ಲಿ ಈವರೆಗೆ ಕೊರೋನಾ ಸೋಂಕಿತರ ಸಂಖ್ಯೆ 3 ಕೋಟಿ 71 ಲಕ್ಷಕ್ಕೆ ಏರಿಕೆಯಾಗಿದೆ.
ನಿತ್ಯದ ಪಾಸಿವಿಟಿ ದರ 16.28 ಕ್ಕೆ ಏರಿಕೆಯಾಗಿದೆ.ದೇಶಾದ್ಯಂತ ಲಸಿಕಾ ಅಭಿಯಾನದ ಅಂಗವಾಗಿ ಈವರೆಗೆ 156 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಮಾಹಿತಿ ನೀಡಿದೆ. ಶನಿವಾರ ದೇಶಾದ್ಯಂತ 57 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.
15 ರಿಂದ 18 ವಯೋಮಾನದ ಮಕ್ಕಳಿಗೆ ಈವರೆಗೆ 3. 36 ಕೋಟಿ ಲಸಿಕೆ ನೀಡಲಾಗಿದೆ ಎಂದೂ ಆರೋಗ್ಯ ಸಚಿವಾಲಯದ ವರದಿ ಹೇಳಿದೆ.
