ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳ ಓದಿಗಾಗಿ 1 ರಿಂದ 12ನೇ ತರಗತಿ PDF ಪಠ್ಯ ಪುಸ್ತಕ

ಇನ್ನೇನು ಮಕ್ಕಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜೆ ಬರುತ್ತಿದೆ. ಆದರೆ ಮಕ್ಕಳು ಮೊದಲಿನ ತರ ರಜೆ ದಿನಗಳನ್ನು ಎಂಜಾಯ್ ಮಾಡುವಾಗಿಲ್ಲ. ಯಾಕೆಂದರೆ ಈಗಾಗಲೇ ಎರಡು ವರ್ಷಗಳ ಕಾಲ ಕೊರೋನಾನಿಂದ ಶಾಲೆಗಳು ನಡೆಯುತ್ತಿರಲಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ಅಷ್ಟೆ ಅಲ್ಲದೆ ಶೈಕ್ಷಣಿಕ ವ್ಯವಸ್ಥೆಯೇ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಮನಸ್ಸಿನ ಮೇಲೂ ವಿದ್ಯೆ ಎನ್ನುವುದು ಅಸಡ್ಡೆ ಭಾವನೆಯನ್ನ ಮೂಡಿಸಿದೆ. ಇದನ್ನು ತಪ್ಪಿಸಲು ಸರ್ಕಾರ ಬೇಸಿಗೆ ರಜೆಯಲ್ಲಿಯೂ ಮಕ್ಕಳನ್ನ ಶಿಕ್ಷಿತರನ್ನಾಗಿ ಮಾಡಲು ಹೊಸದೊಂದು ಪ್ಲ್ಯಾನ್ ಮಾಡಿದೆ.
ಹೌದು ಬೇಸಿಗೆ ರಜೆ ಬಂತು ಅಂದ್ರೆ, ಪರೀಕ್ಷೆಗಳನ್ನ ಬರೆದಿರುವ ಮಕ್ಕಳು ಮುಂದಿನ ತರಗತಿಗಳಿಗೆ ಹೋಗುವ ಕನಸು ಕಾಣುತ್ತಲೇ ರಜೆಯ ಮಜೆ ಸವಿಯುತ್ತಾರೆ. ಮಕ್ಕಳು ಶಾಲೆಗೆ ಹೋದ ಬಳಿಕವಷ್ಟೆ ಮುಂದಿನ ತರಗತಿಯ ಪಠ್ಯಗಳು ಲಭ್ಯವಾಗುವ ಕಾರಣ ಬೇಸಿಗೆಯಲ್ಲಿ ಆಟಾಟೋಪಗಳಲ್ಲೇ ಮಕ್ಕಳು ಕಾಲ ಕಳೆಯುತ್ತಾರೆ. ಇದನ್ನ ತಪ್ಪಿಸಲೆಂದು ರಾಜ್ಯ ಸರ್ಕಾರ 1 ರಿಂದ 12ನೇ ತರಗತಿವರೆಗಿನ ಎಲ್ಲಾ ಪುಸ್ತಕಗಳನ್ನು PDF ರೂಪದಲ್ಲಿ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಇದ್ರಿಂದ ಪೋಷಕರು ತಮ್ಮ ಮಕ್ಕಳ ಸೇರಲಿರುವ ಮುಂದಿನ ತರಗತಿಯ ಪುಸ್ತಕಗಳನ್ನ ಡೌನ್ ಲೋಡ್ ಮಾಡಿಕೊಂಡು ಓದಿಸಲು ನೆರವಾಗುತ್ತಿದೆ. ಈ ಮೂಲಕ ಬೇಸಿಗೆ ರಜೆಯ ಮಜೆಯಲ್ಲೂ ಮಕ್ಕಳಿಗೆ ಪಠ್ಯದ ನಂಟು ಇರಲಿ ಎಂದು ಈ ನಿರ್ಧಾರ ಮಾಡಿದೆ.
ಪಿಡಿಎಫ್ ಪಠ್ಯ ಪಡೆಯಲು ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು, ಅದು ಕರ್ನಾಟಕ ಟೆಕ್ಸ್ಟ್ ಬುಕ್ ವೆಬ್ ಸೈಟ್ ಗೆ ನಿಮ್ಮನ್ನ ಕರೆದುಕೊಂಡು ಹೋಗುತ್ತಿದೆ. ಅಲ್ಲಿ ನಿಮಗೆ ಯಾವ ತರಗತಿ ಪುಸ್ತಕ ಬೇಕೆಂದು ನಮೂದಿಸಿದರೆ ಆ ಪುಸ್ತಕದ ಪಿಡಿಎಫ್ ಕಾಣುತ್ತದೆ. ಅದನ್ನ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆಸಿಕೊಂಡರೆ ಸಾಕು. ಮುಂದೆ ಸೇರುವ ತರಗತಿಯ ಪಠ್ಯಗಳನ್ನ ರಜೆಯಲ್ಲಿ ಓದಿಕೊಂಡರೆ ತರಗತಿಯಲ್ಲಿ ಮಾಡುವ ಪಾಠ ಚೆನ್ನಾಗಿ ಅರ್ಥವಾಗುತ್ತದೆ ಎಂದು ಸರ್ಕಾರ ಈ ಕ್ರಮಕೈಗೊಂಡಿರೋದು ಸ್ವಾಗತಾರ್ಹ.
http://www.ktbs.kar.nic.in/New/index.html#!/textbook
