Breaking NewsLatestರಾಷ್ಟ್ರೀಯಸುದ್ದಿ
28 ದಿನದಲ್ಲಿ 1.50 ಲಕ್ಷ ಜನ ಕೋವಿಡ್ ಗೆ ಬಲಿ

ಲಂಡನ್: ಕೇವಲ ಒಂದು ತಿಂಗಳ ಅವಧಿಯಲ್ಲಿ ಬ್ರಿಟನ್ ನಲ್ಲಿ ಕೋವಿಡ್ ಗೆ 1.50 ಲಕ್ಷ ಬಲಿಯಾಗಿದ್ದಾರೆ. ಯುರೋಪ್ ದೇಶಗಳ ಬಗ್ಗೆ ಅತಿ ಹೆಚ್ಚು ಸಾವು-ನೋವಿಗೆ ಬ್ರಿಟನ್ ಕಾರಣವಾಗಿದೆ. ಸೋಂಕು ಮತ್ತು ಮರಣ ಪ್ರಮಾಣ ಹೆಚ್ಚಾಗುತ್ತಿದ್ದು ಜನತೆಯಲ್ಲಿ ಆತಂಕ ತಂದಿದ್ದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.
ಬ್ರಿಟನ್ ನಂತರ ಯುರೋಪ್ ದೇಶಗಳ ಪೈಕಿ ರಷ್ಯಾದಲ್ಲಿ ಹೆಚ್ಚಿನ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕು ತಗಲಿರುವುದರಿಂದ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಒದಗಿಸುವುದು ಕಷ್ಟಕರವಾಗಿದ್ದು ಬ್ರಿಟನ್ ನಲ್ಲಿ ಸೋಂಕು ನಿಯಂತ್ರಿಸಲು ಸೇನೆ ನೆರವು ಪಡೆಯಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳಿಗೆ ನೆರವಾಗಲು ಆಸ್ಪತ್ರೆ ಸೇವಾಕಾರ್ಯಗಳಿಗೆ ಸೇನೆ ಬಳಸಿಕೊಳ್ಳಲಾಗುತ್ತಿದೆ.
