
ಬೆಂಗಳೂರು: ಕೋವಿಡ್-19 ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸಲು ಲಾಕ್ಡೌನ್ ಇನ್ನೂ ಜೂನ್ 14ರವರೆಗೆ ವಿಸ್ತರಣೆ ಮಾಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 7ರವರೆಗೆ ಲಾಕ್ಡೌನ್ ಜಾರಿಯಲ್ಲಿತ್ತು. ಪ್ರಕರಣಗಳು ಕಡಿಮೆಯಾಗುತ್ತಿವೆಯಾದರೂ ವ್ಯಾಪಿಸುತ್ತಿರುವ ಸರಪಳಿಯನ್ನು ಇನ್ನಷ್ಟು ಕಡಿತಗೊಳಿಸಬೇಕೆಂದರೆ ಲಾಕ್ಡೌನ್ ಅನಿವಾರ್ಯವಾಗಿದ್ದು ಜೂನ್ 14ರ ಬೆಳಗ್ಗೆ 6 ಗಂಟೆವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಆಶಾಕಾರ್ಯಕರ್ತೆಯರಿಗೆ, ಮೀನುಗಾರರಿಗೆ, ಅರ್ಚಕರಿಗೆ ಅಡುಗೆ ಕೆಲಸಗಾರರಿಗೆ ತಲಾ 3 ಸಾವಿರ ಪರಿಹಾರ ಹಾಗೂ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ತಲಾ 2 ಸಾವಿರ ಪರಿಹಾರವನ್ನ ಸಿಎಂ ಬಿಎಸ್ ವೈ ಘೋಷಣೆ ಮಾಡಿದ್ದಾರೆ.
ಎಲ್ಲಾ ಶಾಲೆಗಳು ಮುಚ್ಚಿದ್ದರೂ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಅನುಧಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ. ನ್ಯಾಯವಾಧಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.




