ಮೆಟ್ರೋರಾಜ್ಯಸುದ್ದಿ

ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತ: ಸಿಎಂ ಬೊಮ್ಮಾಯಿ ದಿಗ್ಭ್ರಮೆ

ಬೆಂಗಳೂರು: ತಮಿಳುನಾಡಿನ ಊಟಿ ಬಳಿಯ ಕುನೂರ್ ಬಳಿ ಭಾರತೀಯ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರುವುದು
ದುರದೃಷ್ಟಕರ ಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 
ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಸುದ್ದಕೇಳಿ ದಿಗ್ಭ್ರಮೆ ಹಾಗೂ ತೀವ್ರ ಆಘಾತವಾಗಿದೆ. ಇದರ ಬಗ್ಗೆ ಪೂರ್ಣ ವಿವರ ಪಡೆಯಲಾಗುತ್ತಿದೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಯುತ್ತಿದೆ. ಮತ್ತೊಂದು ಮಾಹಿತಿ ಪ್ರಕಾರ ಬಿಪಿನ್ ರಾವತ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದರು.

ಘಟನೆಯ ಬಗ್ಗೆ ಇಡೀ ದೇಶವೇ ದಿಗ್ಬ್ರಾಂತಿ ಗೊಂಡಿದೆ. ಹೆಚ್ಚಿನ ಮಾಹಿತಿಕಲೆ ಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button