ಸಚಿವರ ವಿರುದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಶಾಸಕರ ಭೇಟಿಗೂ ಸಿಗುತ್ತಿಲ್ಲ. ಸಚಿವರನ್ನು ಭೇಟಿಯಾಗುವುದೇ ದುಸ್ತರವಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾರಕ್ಕೆ ಎರಡು ದಿನ ವಿಧಾನಸೌಧಕ್ಕೆ ಬಂದು ಶಾಸಕರನ್ನು ಭೇಟಿಯಾಗುತ್ತಾರೆ. ಆದರೆ ಸಚಿವರನ್ನು ಭೇಟಿಯಾಗುವುದೆ ದುಸ್ತರವಾಗಿದೆ. ಈ ಹಿಂದೆ ತಮ್ಮ ಸಮಸ್ಯೆಗಳ ನಿವಾರಣೆಗೆ ಸಚಿವರ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಿ ಪರಿಹರಿಸಿದ್ದರು. ಶೇ 70ರಷ್ಟು ಭಾಗ ಸಚಿವರು ವಿಧಾನ ಸೌಧಕ್ಕೆ ಬೇಟಿ ನೀಡಿ ಶಾಸಕರ ಸಮಸ್ಯೆಗಳನ್ನು ಅಲಿಸುತ್ತಿಲ್ಲ. ನಮ್ಮದೇ ಈ ರೀತಿಯ ಸಮಸ್ಯೆಯಾದರೆ ಪಕ್ಷ ವನ್ನು ಬೇರು ಮಟ್ಟದಲ್ಲಿ ಬೆಳಸಿದ, ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಕಾರ್ಯಕರ್ತರ ಗತಿಯೇನ್ನು ಎಂದು ಪ್ರಶ್ನಿಸಿದ್ದಾರೆ.
ಸಚಿವರ ಈ ನಡೆ ಕುರಿತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದು ಸರಿಯಾಗಿಯೇ ಇದೆ. ಸಚಿವರು ಕೇವಲ ಕ್ಯಾಬಿನೆಟ್ ಸಭೆಗಾಗಿ ವಿಧಾನ ಸೌಧಕ್ಕೆ ಬಂದು ಭೇಟಿ ನೀಡುತ್ತಾರೆ ವಿನಹ ಉಳಿದ ಸಂದರ್ಭಗಳಲ್ಲಿ ಸಿಗುವುದೇ ಇಲ್ಲ. ಅವರನ್ನು ಮನೆಯಲ್ಲಿ ಭೇಟಿಯಾಗಬೇಕು ಆದರೆ ಕಾರ್ಯಕರ್ತರಿಗೆ ಇದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸಚಿವರ ಈ ನಡೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಅಸಮರ್ಥ ಸಚಿವರನ್ನು ಕೂಡಲೇ ಬದಲಾಯಿಸಬೇಕು ಸಿಎಂ ಯಡಿಯೂರಪ್ಪ ಅವರನ್ನು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.
