ಧರ್ಮ

ಧರ್ಮದ ಮೂರು ಪ್ರಮುಖ ಲಕ್ಷಣಗಳು

ಭಾರತದ ಅತೀ ಪ್ರಾಚೀನ ಧರ್ಮವೆಂದರೆ ಅದು ಹಿಂದೂ ಧರ್ಮ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಕರೆಯುತ್ತಾರೆ. ಮೊದಲಿಗೆ ನಮ್ಮ ದೇಶವನ್ನು ಸಿಂಧೂ ದೇಶವೆಂದು ಕರೆಯುತ್ತಿದ್ದರಂತೆ, ಕಾಲಕ್ರಮೇಣ ಪರ್ಶಿಯನ್ನರು ಹಿಂದೂ ಎಂದು ಕರೆದರು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮವನ್ನು ವೈಧಿಕ ಧರ್ಮ , ಆರ್ಯ ಧರ್ಮವೆಂದೂ ಕೂಡ ಕರೆಯುತ್ತಿದ್ದರು.

ಅಂದಹಾಗೆ, ಧರ್ಮ ಎಂಬುದಕ್ಕೆ ನಮ್ಮಲ್ಲಿ ಬೇರೆಯೇ ಅರ್ಥ ಇದೆ, ಸನ್ಮಾರ್ಗದಲ್ಲಿ ನಡೆಯುವುದನ್ನ ನಾವು ಧರ್ಮ ಎನ್ನುತ್ತೇವೆ. ಧರ್ಮದ ಹಾದಿಯಲ್ಲಿ ನಡೆಯ ಬಯಸುವವರು ತಮ್ಮೊಳಗೆ ಧರ್ಮದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳಬೇಕಿರುತ್ತದೆ. ಮೊದಲನೆಯದು ತಾಳ್ಮೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ, ತಂತ್ರದ ಅಭ್ಯಾಸವನ್ನು ಆರಂಭಿಸಿದ ಯಾರಾದರೂ ತಕ್ಷಣ ಫಲಿತಾಂಶ ಬೇಕು ಎಂದರೆ ಅದು ಸರಿಯಲ್ಲ.

ಅದಕ್ಕೆ ತಾಳ್ಮೆ ಬೇಕು. ಹಾಗಾಗಿ ಧರ್ಮದ ಮೊದಲ ಲಕ್ಷಣವೇ ತಾಳ್ಮೆ. ಎರಡನೆಯ ಲಕ್ಷಣ ಕ್ಷಮೆ. ಪ್ರತಿಯೊಂದು ಕ್ರಿಯೆಗೆ ಸಮನಾದ ಹಾಗೂ ವಿರುದ್ಧದ ಪ್ರತಿಕ್ರಿಯೆ ಎಂಬುದು ಇದ್ದೇ ಇರುತ್ತವೆ. ಆದರೆ ಈ ಅಂಶಗಳು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾಗುತ್ತಿರುವ ಕಾರಣ ಆಗಾಗ ಮೂರು ಅಂಶಗಳು ಸಹಾ ಬದಲಾಗುತ್ತಿರುತ್ತವೆ. ಉದಾಹರಣೆಗೆ ಯಾರೋ ಒಬ್ಬರು ನಿಮ್ಮನ್ನು ಥಳಿಸುವ ಮೂಲಕ ತರಲೆ ಮಾಡಬಹುದು. ಈ ಕ್ರಿಯೆಗೆ ತಕ್ಷಣ ಪ್ರತಿಕ್ರಿಯೆ ಇರುತ್ತದೆ.

ಸೇಡು ತೀರಿಸಿಕೊಳ್ಳುವ ಸಮಯ ಬಂದಾಗ ನೀವು ನೀವಾಗಿಯೇ ಯಾವುದೇ ಪ್ರತಿಕ್ರಿಯೆ ತೋರುವುದಿಲ್ಲ. ಈ ಮೂಲಕ ನೀವು ಈ ಮುಂದುವರಿಕೆಯ ಸರಪಳಿಯನ್ನು ಮುರಿಯುತ್ತೀರಿ. ನಿಮ್ಮ ಸ್ವಪ್ರೇರಣೆಯಿಂದ ಕ್ರಿಯೆ ಮತ್ತು ಪ್ರತಿಕ್ರಿಯೆಯ ಸರಪಳಿ ನಿಲ್ಲುವುದನ್ನೇ ಕ್ಷಮೆ ಎನ್ನಲಾಗುತ್ತದೆ. ಧರ್ಮದ ಮೂರನೇ ಲಕ್ಷಣ ಕ್ರೋಧ ಅಥವಾ ಕೋಪ ಮಾಡಿಕೊಳ್ಳದಿರುವುದು.

ಕ್ರೋಧ ಅಥವಾ ಕೋಪದ ಕಾರಣ ನೀವು ತಪ್ಪು ಮಾರ್ಗ ಹಿಡಿಯಬಾರದು. ಕೋಪ ಎಂಬುದು ಸುಪ್ತ ಮನಸ್ಸಿನ ಪ್ರಭಾವದಲ್ಲಿ ಅಲ್ಲದೆ ನರಕೋಶಗಳು ಮತ್ತು ತಂತುಗಳ ಪ್ರಭಾವದಲ್ಲಿರುತ್ತದೆ. ಹಾಗಾಗಿ ಇದು ತೀರಾ ಆಪಾಯಕಾರಿ. ಸಮಾಜದಲ್ಲಿನ ಪಾಪಿಗಳ ಕುಕೃತ್ಯಗಳನ್ನು ತಡೆಯುವ ಸಲುವಾಗಿ ನೀವು ಕೋಪ ಪ್ರದರ್ಶಿಸಬಹುದು. ಇದನ್ನು ‘ಸಚೇತನಕಾರಿ ಕೋಪ’ ಎನ್ನಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button