Breaking NewsLatestಇತರ ಕ್ರೀಡೆಕ್ರೀಡೆ

ಸೆಮಿಫೈನಲ್​​​ಗೆ ಪಿ.ವಿ.ಸಿಂಧು: ಭಾರತಕ್ಕೆ ಮತ್ತೊಂದು ಪದಕದ ಭರವಸೆ

ಟೋಕಿಯೋ: ವಿಶ್ವದ 4ನೇ ರಾಂಕ್ ಆಟಗಾರ್ತಿ ಜಪಾನಿನ ಅಕಾನೆ ಯಮಗುಚಿ ವಿರುದ್ಧದ ಕ್ವಾರ್ಟರ್ ಫೈನಲ್ ನಲ್ಲಿ ಜಯ ಗಳಿಸಿದ ಭಾರತದ ಪಿ.ವಿ.ಸಿಂಧೂ ಬ್ಯಾಡ್ಮಿಂಟನ್ ನ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಸಿಂಧೂ 21-13, 22-20 ಅಂತರದಲ್ಲಿ ಜಯ ಗಳಿಸಿ ಪದಕ ಗೆಲ್ಲುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಜಪಾನ್​ನ ಅಕಾನೆ ಯಮಗುಚಿ ಅವರು ಈ ಮೊದಲು ವಿಶ್ವದ ಮೊದಲ ಶ್ರೇಯಾಂಕಿತ ಆಟಗಾರ್ತಿಯಾಗಿದ್ದರು. ಈಗ ವಿಶ್ವದ ಐದನೇ ಶ್ರೇಯಾಂಕದಲ್ಲಿದ್ಧಾರೆ.

ಯಮಗುಚಿ ಅವರು ರಿಯೊ ಒಲಂಪಿಕ್ಸ್​ನಲ್ಲೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಮೊದಲು ಸಿಂಧು ಹಾಗೂ ಯಾಮಗುಚಿ ನಡುವೆ ಒಟ್ಟು ಹದಿನೆಂಟು ಪಂದ್ಯಗಳು ನಡದಿದ್ದು ಅದರಲ್ಲಿ ಸಿಂಧು ಅವರು 11ರಲ್ಲಿ ಹಾಗೂ ಯಾಮಗುಚಿ ಏಳರಲ್ಲಿ ಜಯ ಸಾಧಿಸಿದ್ದಾರೆ.

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿಗೆದ್ದಿರುವ ಸಿಂಧೂ ಸೆಮಿಫೈನಲ್ ನಲ್ಲಿ ವಿಶ್ವದ ನಂ1 ಆಟಗಾರ್ತಿ ಚೈನೀಸ್ ತೈಪೆಯ ತಯ್ ಝು ಯಿಂಗ್ ವಿರುದ್ಧ ಸೆಣಸಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button