Breaking Newsಕೋಲಾರಜಿಲ್ಲಾ ಸುದ್ದಿ

ಪಿಕಪ್​​​​​​​ ವಾಹನ- ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ: ತಂದೆ-ಮಗ ಸಾವು

ಕೋಲಾರ: ಕುರಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಮತ್ತು ಕಲ್ಲು ಚಪ್ಪಡಿ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಾಲೂರು ತಾಲ್ಲೂಕಿನ ಟೇಕಲ್ ಸಮೀಪದ ಸೀತಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತ ನಡೆದಿದ್ದು, ಅಪಘಾತದಲ್ಲಿ ತಂದೆ ಹನುಮಂತ್(40) ಮಗ ಭುವನ್ (10) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಿಕಪ್​​​​​​​​​​​​​​​​​​​​ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಬಂಗಾರಪೇಟೆ ಸಂತೆಗೆ ಹೋಗುತ್ತಿದ್ದಾಗ ಎದುರುಗಡೆ ಬರುತ್ತಿದ್ದ ಕಲ್ಲುಚಪ್ಪಡಿ ತುಂಬಿಕೊಂಡಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಿಕಪ್​​ ವಾಹನ ಪಲ್ಟಿ ಹೊಡೆದಿದೆ.

ಘಟನಾ ಸ್ಥಳದಿಂದ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ ಸ್ಥಳಕ್ಕೆ ಮಾಸ್ತಿ ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button