ನಿದ್ದೆಯಲ್ಲಿ ನಡೆದೀರಿ ಜೋಕೆ!

ಪವಿತ್ರಾ ಶೆಟ್ಟಿ
ನಿದ್ದೆಯಲ್ಲಿ ನಡೆದಾಡುವ ಅಭ್ಯಾಸ ನಿಮಗಿದೆಯೇ? ಇದು ಯಾಕೆ ಹೀಗಾಗುತ್ತದೆ ಎಂದು ಯಾವತ್ತಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೀರಾ?
ರಾತ್ರಿ ಎದ್ದು ನಡೆಯುವವರಿಗೆ ಬೆಳಗ್ಗೆ ಎದ್ದು ಘಟನೆಯ ಬಗ್ಗೆ ಕೇಳಿದರೆ ಏನು ನೆನಪಿರುವುದಿಲ್ಲ. ಏಕೆಂದರೆ ಇದು ಸ್ಮರಣೆಗೆ ಸಂಬಂಧಿಸಿದ್ದಲ್ಲ. ನಿದ್ದೆ ಮಾಡಿದ ವ್ಯಕ್ತಿಗೆ ಬೆಳಿಗ್ಗೆ ಎದ್ದಾಗ ಏನು ನೆನಪಿರುವುದಿಲ್ಲ.
ಹೀಗಾದಾಗ ರಾತ್ರಿ ನಿದ್ದೆಯಲ್ಲಿ ನಡೆಯುವ ವ್ಯಕ್ತಿಯನ್ನು ಕಂಡರೆ ನೀವು ಅವನನ್ನು ಎಚ್ಚರಗೊಳಿಸಲು ಹೋಗದಿರಿ. ಆಗ ಅವನು ನಿಮ್ಮ ಮೇಲೆ ದಾಳಿ ನಡೆಸಬಹುದು. ಅವನು ಗಾಢನಿದ್ರೆಯಲ್ಲಿ ಇರುವ ಪರಿಣಾಮ ಯಾರು ನನಗೆ ಹೊಡೆಯಲು ಬರುತ್ತಾರೆ ಎಂದು ಭಾವಿಸುತ್ತಾನೆ.
ಈ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆ ಇರುವ ವ್ಯಕ್ತಿಗಳು ಹೆಚ್ಚಾಗಿ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ಟ್ರಿಕ್ ಹೊಟ್ಟೆಯುಬ್ಬರದಂಥ ಸಮಸ್ಯೆಗಳು ಬಹುಬೇಗ ಇವರನ್ನು ಕಾಡುತ್ತವೆ.
ಇದಕ್ಕೆ ಪರಿಹಾರವೆಂದರೆ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುವುದು. ವ್ಯಕ್ತಿಯ ಮಾನಸಿಕ ಸ್ಥಿತಿಯ ಬಗ್ಗೆ ಪರಿಶೀಲಿಸುವುದು. ಆಪ್ತಸಮಾಲೋಚಕರ ಬಳಿ ತೆರಳಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು




