ಕೋಲಾರ
ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಬೋನಿಗೆ

ಕೋಲಾರ: ಹಲವು ದಿನಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಬೆಟ್ಟದಲ್ಲಿ ಸುಮಾರು ದಿನಗಳಿಂದ ವಾಸ ಮಾಡುತ್ತಿದ್ದ ಚಿರತೆ ದೇವರಾಯಸಮುದ್ರ ಗ್ರಾಮದ ಸಾಕುಪ್ರಾಣಿಗಳನ್ನು ತಿನ್ನುತ್ತಿದ್ದುದಲ್ಲದೆ ಆಗಾಗ ಗ್ರಾಮದ ಸುತ್ತಮುತ್ತ ಓಡಾಡುತ್ತಿತ್ತು… ಇದರಿಂದ ಗ್ರಾಮಸ್ಥರು ಒಂಟಿಯಾಗಿ ಓಡಾಡಲು ಭಯಭೀತಗೊಂಡಿದ್ದರು.
ಗ್ರಾಮಸ್ಥರ ದೂರಿನ ಮೇರೆಗೆ ಚಿರತೆ ಓಡಾಡುವ ಸ್ಥಳವನ್ನು ಗುರ್ತಿಸಿ ಬೋನನ್ನು ಇಡಿಸಿ ಅದರಲ್ಲಿ ಕುರಿ ಮತ್ತು ಕೋಳಿಗಳನ್ನು ಇಡಲಾಗಿತ್ತು ಅವುಗಳನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ.
ಅರಣ್ಯ ಅಧಿಕಾರಿಗಳಾದ ಭರತ್ ಕುಮಾರ್ ರೆಡ್ಡಿ, ಪ್ರಜ್ವಲ್, ಗಾರ್ಡ್ ಗಳಾದ ಅನೀಲ್, ಪಿ.ಸುಬ್ರಮಣಿ, ಮಂಜುನಾಥ್, ಕೃಷ್ಣಮೂರ್ತಿ ಪರಿಶ್ರಮದಿಂದ ಚಿರತೆಯನ್ನು ಹಿಡಿಯಲಾಗಿದೆ.




