ಹಾಕಿ: ಸ್ಪೇನ್ ಗೆ ಸೋಲುಣಿಸಿದ ಭಾರತ

ಟೋಕಿಯೋ: ಸ್ಪೇನ್ ವಿರುದ್ಧದ ಲೀಗ್ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ ಭಾರತ ಒಲಿಂಪಿಕ್ಸ್ ನಲ್ಲಿ ಜಯದ ಲಯ ತಲುಪಿದೆ.
ಆಸ್ಟ್ರೇಲಿಯಾ ವಿರುದ್ಧ 1-7 ಗೋಲುಗಳ ಹೀನಾಯ ಸೋಲನುಭವಿಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಭಾರತ ತಂಡ ವಿಶ್ವದ 9ನೇ ರ‍್ಯಾಂಕ್ ಸ್ಪೇನ್ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ಪಂದ್ಯ ಆರಂಭಗೊಂಡ 14ನೇ ನಿಮಿಷದಲ್ಲಿ ಸಿಮ್ರಾನ್ಜೀತ್ ಸಿಂಗ್ ಗಳಿಸಿದ ಗೋಲು ತಂಡಕ್ಕೆ ಮುನ್ನಡೆ ತಂದು ಕೊಟ್ಟಿತು. ನಂತರ ಭೂಪಿಂದರ್ ಸಿಂಗ್ (15 ಮತ್ತು 51ನೇ ನಿಮಿಷ) ಎರಡು ಗೋಲು ಗಳಿಸಿ ಜಯ ತಂದುಕೊಟ್ಟರು.
ಎ ಗುಂಪಿನ ಲೀಗ್ ಹಂತದ ಮುಂದಿನ ಪಂದ್ಯದಲ್ಲಿ ಭಾರತ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ.
ಗೆದ್ದರೂ ಮುನ್ನಡೆ ಇಲ್ಲ:

ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಬ್ರಿಟನ್ ನ ಬೆನ್ ಲೇನ್ ಮತ್ತು ಸೇನ್ ವೆಂಡಿಯ ವಿರುದ್ದ 21-17, 21-19 ಅಂತರದಲ್ಲಿ ಜಯ ಗಳಿಸಿದರೂ ಕ್ವಾರ್ಟರ್ ಫೈನಲ್ ತಲಪುವಿಲ್ಲಿ ವಿಫಲರಾಗಿದ್ದಾರೆ.
ಕೊರೊನಾದ ಆತಂಕ:
ಈ ನಡುವೆ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ನಾಲ್ಕು ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಅದರಲ್ಲಿ ಇಬ್ಬರು ಕ್ರೀಡಾಪಟುಗಳಾಗಿದ್ದಾರೆ.
