ಉತ್ತರ ಕನ್ನಡಜಿಲ್ಲಾ ಸುದ್ದಿ

ಕಟ್ಟಿಗೆ ಸಂಗ್ರಹಿಸಿಟ್ಟ ಶೆಡ್ ನಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು

ಕಾರವಾರ : ಮನೆಯ ಕಟ್ಟಿಗೆ ಸಂಗ್ರಹಿಸಿಡುವ ಶೆಡ್‌ವೊಂದರಲ್ಲಿ ಬೃಹತ್ ‌ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿ ಕೆಲ ಕಾಲ ಮನೆಯವರಿಗೆ ಆತಂಕ ಸೃಷ್ಟಿಸಿದ ಘಟನೆ ಭಟ್ಕಳ ತಾಲೂಕಿನ ಆಸರಕೇರಿಯಲ್ಲಿ ನಡೆದಿದೆ.

ಆಸರಕೇರಿ ನಿವಾಸಿ ಶನಿಯಾರ ನಾಯ್ಕ ಪೈಕಿಮನೆಯ ಹಿಂಭಾಗದಲ್ಲಿ ಕೂಡಿಟ್ಟ ಕಟ್ಟಿಗೆ ಸಂಗ್ರಹಿಸಿಡುವ ಶೆಡ್‌ ನಲ್ಲಿ ಬೃಹತ್ ‌ಗಾತ್ರದ ಹೆಬ್ಬಾವೊಂದು ಇರುವುದನ್ನು ನೋಡಿದ ಮನೆಯ ಮಹಿಳೆ ಒಮ್ಮೆ ಭಯಭೀತರಾಗಿದ್ದಾರೆ. ನಂತರ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.

ರಾಜೇಶ ನಾಯ್ಕ ಹಾಗೂ ಆಸರಕೇರಿಯ ಯುವಕರ ಸಹಾಯದಿಂದ ಹೆಬ್ಬಾವನ್ನು ಸೆರೆ ಹಿಡಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button