ಸಿನಿಮಾಸೆಲೆಬ್ರಿಟಿ

ಸಂಜೂ ಹುಟ್ಟುಹಬ್ಬಕ್ಕೆ ಅಧೀರನ ಟೀಸರ್

ಸ್ಯಾಂಡಲ್‌ವುಡ್ ಹೈವೋಲ್ಟೆಜ್ ಚಿತ್ರಗಳಲ್ಲಿ ಕೆಜಿಎಫ್ 2 ಚಿತ್ರವೂ ಒಂದು. ಚಿತ್ರದ ಬಿಡುಗಡೆ ಯಾವಾಗ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ. ಕೊರೋನಾ ಕಾಟದಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ.

ಈಗ ಕೆಜಿಎಫ್ 2 ಚಿತ್ರತಂಡದಿಂದ ಮತ್ತೊಂದು ಹೊಸ ಸುದ್ದಿ ಕೇಳಿಬಂದಿದೆ. ಕೆಜಿಎಫ್ 2 ಚಿತ್ರದಲ್ಲಿ ರಾಕಿಬಾಯ್ ಪಾತ್ರದಂತೆ ಅಧೀರನ ಪಾತ್ರವು ಪ್ರಾಮುಖ್ಯತೆ ಪಡೆದಿದೆ. ಬಾಲಿವುಡ್ ಖಳನಾಯಕ್ ಸಂಜಯ್ ದತ್ ಅಧೀರನಾಗಿ ಕಾಣಿಸಿಕೊಂಡಿದ್ದಾರೆ. ಇದೇ 29ಕ್ಕೆ ಸಂಜಯ್‌ದತ್ ಅವರ ಹುಟ್ಟುಹಬ್ಬ. ಹಾಗಾಗಿ ಕೆಜಿಎಫ್ 2 ಚಿತ್ರತಂಡದಿಂದ ಸಂಜುಗೆ ಭರ್ಜರಿ ಉಡುಗೊರೆ ನೀಡಲು ನಿರ್ಧರಿಸಲಾಗಿದೆ.

ಅದರಂತೆ ಅಂದು ಅಧೀರ ಪಾತ್ರದ ಹೊಸ ಟೀಸರ್ ಬಿಡುಗಡೆಯಾಗಲಿದೆ. ಇದಕ್ಕಾಗಿ ಚಿತ್ರತಂಡ ಎಲ್ಲಾ ಪ್ಲಾನ್ ಮಾಡಿಕೊಂಡಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ ಅಧೀರನ ಫಸ್ಟ್ ಲುಕ್ ರೋಚಕವಾಗಿತ್ತು. ಈಗ ಟೀಸರ್ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಸಿನಿಪ್ರಿಯರಲ್ಲಿ ಮೂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button