ಕೋಲಾರ
ನಕ್ಷತ್ರದಂತೆ ಹೊಳೆಯುವ ಆಮೆ ಪ್ರತ್ಯಕ್ಷ; ರಕ್ಷಿಸಿ ನೀರಿಗೆ ಬಿಟ್ಟ ವಲಯ ಅರಣ್ಯಾಧಿಕಾರಿ

ಕೋಲಾರ: ಆಮೆ ಅಂದರೆ ಕಪ್ಪು ಬಣ್ಣದ ಚಿಪ್ಪಿನೊಂದಿಗೆ ಇರುತ್ತದೆ. ಆದರೆ ಇಲ್ಲೊಂದು ಬಂಗಾರದಂತೆ ಹೊಳೆಯುವ ನಕ್ಷತ್ರಗಳಂತೆ ಕಂಗೊಳಿಸುವ ಆಮೆಯೊಂದು ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷಗೊಂಡಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಬರಹಳ್ಳಿ ಗ್ರಾಮದ ವಲಯ ಅರಣ್ಯ ಪ್ರದೇಶದಲ್ಲಿವಿಶೇಷ ರೀತಿಯ ಆಮೆಯೊಂದು ಕಾಣಿಸಿಕೊಂಡಿದೆ. ವಿಶೇಷ ರೀತಿಯ ಆಮೆಯನ್ನು ವಲಯ ಅರಣ್ಯಾಧಿಕಾರಿ ಸುಬ್ರಮಣಿ ರಕ್ಷಣೆ ಮಾಡಿ ನೀರಿಗೆ ಬಿಟ್ಟಿದ್ದಾರೆ.
ನಕ್ಷತ್ರಗಳಂತೆ ಹೋಲುವ ಆಮೆಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ ಎಂದು ಇತ್ತೀಚೆಗೆ ಅದನ್ನೇ ಕೆಲವರು ವ್ಯಾಪಾರವಾಗಿ ಮಾಡಿಕೊಂಡಿದ್ದರು. ಆದರೆ ಇಂತಹ ವಿಚಿತ್ರ ರೀತಿಯ ಆಮೆ ಸಿಕ್ಕಿದ ತಕ್ಷಣ ಅದನ್ನು ರಕ್ಷಿಸಲಾಗಿದೆ.




