ಚಿಕ್ಕಮಗಳೂರು
ಸಾಯಿಬಾಬಾ ಮಂದಿರದಲ್ಲಿ ಗುರುಪೌರ್ಣಮಿ

ಚಿಕ್ಕಮಗಳೂರು: ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ಗುರುಪೌರ್ಣಮಿ ಉತ್ಸವ ಸರಳವಾಗಿ ಆಚರಿಸಲಾಯಿತು. ಸರತಿ ಸಾಲಿನಲ್ಲಿ ಭಕ್ತಾದಿಗಳು ನಿಯಮಿತವಾಗಿ ಸಾಯಿಬಾಬಾ ಮೂರ್ತಿಯ ದರ್ಶನ ಮಾಡಿದರು.
ವಿಶೇಷ ಅಲಂಕಾರದೊಂದಿಗೆ ವಿವಿಧ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಈ ವೇಳೆ ಮಂದಿರದ ಮುಖ್ಯಟ್ರಸ್ಟಿ ಮಾತನಾಡಿ, ಪ್ರತೀ ವರ್ಷ ಗುರುಪೌರ್ಣಮಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಕೋವಿಡ್ ಪರಿಣಾಮ ಸಾಮಾಜಿಕ ಅಂತರ ಕಾಪಾಡಬೇಕಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.




