Breaking NewsLatestರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಭೂಕುಸಿತಕ್ಕೆ 36 ಮಂದಿ ಬಲಿ

ರಾಯಗಡ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಸಂಭವಿಸಿದ ಭೂಕುಸಿತದಿಂದ 36 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ಕರಾವಳಿಯುದ್ದಕ್ಕೂ ಸಾವಿರಾರು ಜನರು ಪ್ರವಾಹ ಮತ್ತು ಭುಕುಸಿದಲ್ಲಿ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್ ಬಳಸಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯ ಭರದಿಂದ ಸಾಗಿದೆ.

ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರು ಮನೆಗಳ ಛಾವಣಿ ಮೇಲೆ ಇಲ್ಲವೆ ಎತ್ತರದ ಸ್ಥಳಗಳಿಗೆ ಹೋಗುವಂತೆ ಆಡಳಿತ ಸೂಚಿಸಿದೆ. ಅಲ್ಲಿಮದ ರಕ್ಷಣಾ ತಂಡಗಳು ಅವರನ್ನು ಬೇರೆಡೆಗೆ ಕೊಂಡೊಯ್ಯಲು ಅನುಕೂಲವಾಗಲಿದೆ.

ಕರಾವಳಿ ನಗರವಾದ ರತ್ನಗಿರಿ ಜಿಲ್ಲೆಯ ಚಿಪ್ಲುನ್​ನಲ್ಲಿ ವಶಿಷ್ಠಿ ನದಿ ಉಕ್ಕಿ ಹರಿಯುತ್ತಿದ್ದು, ಮನೆಗಳು, ರಸ್ತೆಗಳು ಜಲಾವೃತವಾಗಿವೆ.

ನೌಕಾದಳದ ಎರಡು ರಕ್ಷಣಾ ತಂಡಗಳು, ಸ್ಥಳಿಯ 12 ಪರಿಹಾರ ತಂಡಗಳು, ಕರಾವಳಿ ರಕ್ಷಣಾ ಪಡೆಯ ಎರಡು ತಂಡಗಳು ಹಾಗೂ ಎನ್​ಡಿಆರ್​ಎಫ್​ನ ಮೂರು ತಂಡಗಳು ಪ್ರವಾಹದಲ್ಲಿ ಸಿಲುಕಕೊಂಡಿರುವವರ ರಕ್ಷಣೆಯಲ್ಲಿ ತೊಡಗಿವೆ.

Spread the love

Related Articles

Leave a Reply

Your email address will not be published. Required fields are marked *

Back to top button