ಬೆಳಗಾವಿ
ನವಿಲುತೀರ್ಥ ಅಣೆಕಟ್ಟೆ ಗೇಟ್ ಓಪನ್; ರಾಮದುರ್ಗ, ಗದಗ, ಬಾದಾಮಿಯಲ್ಲಿ ಕಟ್ಟೆಚ್ಚರ

ಬೆಳಗಾವಿ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ನವಿಲುತೀರ್ಥ (ಮಲಪ್ರಭಾ) ಡ್ಯಾಮ್ ಗೆ ಸಾಕಷ್ಟು ನೀರು ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈಗ ಸದ್ಯ ಅಧಿಕಾರಿಗಳು ಡ್ಯಾಮ್ ನಿಂದ ನೀರನ್ನು ಹೊರಬಿಡುತ್ತಿದ್ದಾರೆ.
ಮಲಪ್ರಭಾ ಅಣೆಕಟ್ಟೆಯಿಂದ ಸುಮಾರು 2000 ಕ್ಯೂಸೆಕ್ಸ್ ನಷ್ಟು ನೀರನ್ನು ಸದ್ಯ ಹೊರ ಬಿಡುತ್ತಿದ್ದಾರೆ. ಸಾಯಂಕಾಲದ ಹೊತ್ತಿಗೆ 5000 ಕ್ಯೂಸೆಕ್ಸ್ ನ್ನಷ್ಟು ಹೆಚ್ಚಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿಯ ರಾಮದುರ್ಗ ತಾಲ್ಲೂಕು, ಬಾಗಲಕೋಟೆಯ ಬಾದಾಮಿ, ಹಾಗೂ ಗದಗ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ವರಿಷ್ಠರು ಹಾಗೂ ತಾಲ್ಲೂಕು ಆಡಳಿತ ಈಗಾಗಲೇ ಮುನ್ಸೂಚನೆ ನೀಡಿದ್ದು, ನದಿ ತೀರದ ಗ್ರಾಮಗಳಲ್ಲಿ ಹಾಗೂ ನದಿ ತಟದಲ್ಲಿ ಎಚ್ಚರಿಕೆ ಯಿಂದ ಇರುವಂತೆ ತಿಳಿಸಿದ್ದಾರೆ.




