ಚಿಕ್ಕಮಗಳೂರು
ಮಳೆ; ಗೋಡೆ ಕುಸಿದು ರೈತ ಸಾವು

ಚಿಕ್ಕಮಗಳೂರು: ಮಳೆ ಸುರಿಯುತ್ತಿದ್ದಾಗ ಕೊಟ್ಟಿಗೆಯ ಗೋಡೆ ಕುಸಿದು ರೈತರೋರ್ವರು ಮೃತರಾಗಿರುವ ಘಟನೆ ಕ್ಯಾತನಬೀಡು ಗ್ರಾಮದಲ್ಲಿ ನಡೆದಿದೆ.
ರೈತ ಬಸವೇಗೌಡ (60) ಮೃತ ದುರ್ದೈವಿ. ಜತೆಗೆ ಕೊಟ್ಟಿಗೆಯೊಳಗಿದ್ದ ಎರಡು ಹಸುಗಳೂ ಸಾವನ್ನಪ್ಪಿವೆ. ಮೊಮ್ಮಗ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಸುಗಳಿಗೆ ಮೇವು ನೀಡಲೆಂದು ಕೊಟ್ಟಿಗೆಗೆ ಹೋದಾಗ ಈ ಘಟನೆ ನಡೆದಿದೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದರು. ಗೋಡೆ ಸಂಪೂರ್ಣ ಕುಸಿದು ದೇಹ ಮುಚ್ಚಿ ಹೋಗಿದ್ದರಿಂದ ಪ್ರಾಣರಕ್ಷಣೆ ಸಾಧ್ಯವಾಗಲಿಲ್ಲ.




