ಚಿಕ್ಕಮಗಳೂರು

ಸಿಎಂ ಬದಲಾವಣೆ ಯತ್ನಕ್ಕೆ ವೀರಶೈವ ಮಹಾಸಭಾ ವಿರೋಧ

ಚಿಕ್ಕಮಗಳೂರು: ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಸ್ಥಾನಪಲ್ಲಟ ಮಾಡಲು ನಡೆಯುತ್ತಿರುವ ಯತ್ನಕ್ಕೆ ವೀರಶೈವ ಮಹಾಸಭಾ ಹಾಗೂ ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.


ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಸಮರ್ಥ ಆಡಳಿತ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬದಲಾವಣೆ ಸರಿಯಾದ ಕ್ರಮವಲ್ಲ. ಸಂಘಪರಿವಾರ ಸಹಿತ ಯಾವುದೇ ಶಕ್ತಿಗಳು ಸಿಎಂ ಯಡಿಯೂರಪ್ಪರನ್ನು ಬದಲಾವಣೆ ಮಾಡುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಹೊರಾಟ ತೀವ್ರ ಸ್ವರೂಪದ್ದಾಗಲಿದೆ ಎಂದು ಏಚ್ಚರಿಕೆ ನೀಡಿದ್ದಾರೆ.


ಸಮಾಜದ ಮುಖಂಡರಾದ ಎಂ.ಸಿ.ಶಿವಾನಂದಸ್ವಾಮಿ, ಎಂ.ಎಸ್.ನಿರಂಜನ, ಚಂದ್ರಮೌಳಿ, ಗಿರಿರಾಜ್, ಏಕಾಂತರಾಮು, ಸಿ.ಇ.ನಂದೀಶ್ ಮತ್ತಿತರರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button