ಉತ್ತರ ಕನ್ನಡ

ಭಟ್ಕಳದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

ಕಾರವಾರ : ಭಟ್ಕಳ ತಾಲೂಕಿನ ಹೆಬ್ಳೆ ಗಾಂಧಿನಗರ ಸರ್ಕಲ್‌ ಹತ್ತಿರ ಹೋಟೆಲ್‌ ಒಂದರ ಮುಂಭಾಗದಲ್ಲಿ ದಿನೇಶ ರಾಮ ಗೊಂಡ ಎಂಬವರಿಗೆ ಇಬ್ಬರು ವ್ಯಕ್ತಿಗಳು ಜಾತಿಯ ಹೆಸರಲ್ಲಿ ಅವಾಚ್ಯ ಶಬ್ಧಗಳಿಂದ ಬೈದು ಮಾರಣಾಂತಿಕ ಹಲ್ಲೆ ನಡೆಸಿರುವ ಕುರಿತು ತಡವಾಗಿ ದೂರು ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಭಟ್ಕಳ ತಾಲೂಕಿನ ಗಾಂಧಿನಗರದ ಜಗದೀಶ ವಾಸು ಮೊಗೇರ ಹಾಗೂ ಹುರುಳಿಸಾಲಿನ ಸಣ್ತಮ್ಮ ರಾಮ ನಾಯ್ಕ ಜು.19ರ ರಾತ್ರಿ 8 : 45 ರ ಸಮಯಕ್ಕೆ ಭಟ್ಕಳದ ಹೆಬ್ಳೆ ಗಾಂದಿನಗರದ ಸರ್ಕಲ್‌ ಹತ್ತಿರ ಇರುವ ಖಾಸಗಿ ಹೋಟೆಲ್‌ ಒಂದರ ಮುಂಭಾಗದಲ್ಲಿ ದಿನೇಶ ರಾಮ ಗೊಂಡ ಹಾಗೂ ಮಾದೇವ ಮಾಸ್ತಿ ಗೊಂಡ ಎಂಬವರನ್ನು ಅಡ್ಡಗಟ್ಟಿ ತಡೆದು ಅವರಿಗೆ ಜಾತಿಯ ಹೆಸರಲ್ಲಿ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿದ್ದಲ್ಲದೆ, 24 ವರ್ಷದ ದಿನೇಶ ರಾಮ ಗೊಂಡ ಬೆನ್ನಿನ ಎಡಭಾಗಕ್ಕೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಗಾಯಾಳು ದಿನೇಶ ರಾಮ ಗೊಂಡ ಅವರನ್ನು ಚಿಕಿತ್ಸೆಗಾಗಿ ದೂರದ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲಿಸಲಾಗಿದೆ.ಪ್ರಕರಣದ ಬಗ್ಗೆ ಸಂತೋಷ ನಾಗಯ್ಯ ಗೊಂಡ ಅವರು ತಾಲೂಕಿನ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿತರ ವಿರುದ್ಧ ದೂರ ಉದಾಖಲಿಸಿಕೊಂಡು ಬಮಧಿಸಲಾಗಿದೆ. ಗ್ರಾಮೀಣ ಪೋಲಿಸ್‌ ಠಾಣಾ ಪಿಎಸ್‌ ಐ ಭರತ ಕುಮಾರ ತನಿಖೆಯನ್ನು ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button