ಕಬ್ಬಿಣಾಂಶದೊಂದಿಗೆ ದೇಹ ತೂಕ ಇಳಿಸುವುದು ಹೇಗೆ..?

ಪವಿತ್ರಾ ಶೆಟ್ಟಿ
ಕಬ್ಬಿಣ ಅಂಶ ಹೆಚ್ಚಿರುವ ಆಹಾರ ಸೇವನೆಯಿಂದ ಆರೋಗ್ಯವಂತರಾಗಿರುವ ಜೊತೆಗೆ ನಿಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹೇಗೆ ಎನ್ನುತ್ತೀರಾ?
ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ದೊರೆಯುತ್ತದೆ. ಅದರೊಂದಿಗೆ ಪಾಲಕ್ ಸೊಪ್ಪು ಹೆಚ್ಚುವರಿ ಕ್ಯಾಲೋರಿಯನ್ನು ಕರಗಿಸುತ್ತದೆ
ಹಾಗಾಗಿ ಪಾಲಕ್ ಸೊಪ್ಪಿನ ಸೇವನೆಯಿಂದ ಎರಡು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇದರ ಹೊರತಾಗಿ ಬ್ರೊಕೋಲಿಗೂ ಇದೇ ಗುಣವಿದೆ. ಇದು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಕ್ಯಾಲರಿಯನ್ನು ದಹಿಸುತ್ತದೆ. ಜೊತೆಗೆ ಸಾಕಷ್ಟು ಪ್ರಮಾಣದ ನಾರಿನಂಶವನ್ನು ಒದಗಿಸುತ್ತದೆ.
ಸೋಯಾಬೀನ್ಸ್ ಕಡಲೆಕಾಳು ಮೊದಲಾದ ಧಾನ್ಯಗಳು ಪುಣ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ಒದಗಿಸಿ ಮೂಳೆ ಹಾಗೂ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಅದೇ ರೀತಿ ಇದರಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕ ಅಂಶಗಳು ಹಾಗೂ ನಾರಿನಂಶ ಇರುವ ಕಾರಣ ದೇಹಕ್ಕೆ ಶಕ್ತಿ ನೀಡಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ತೂಕ ಇಳಿಸಿಕೊಳ್ಳುವುದು ಸುಲಭವಾಗುತ್ತದೆ.




