Dragon Fruit: ಡ್ರ್ಯಾಗನ್ ಹಣ್ಣು ತಿಂದಿರಾ?

ಪವಿತ್ರಾ ಶೆಟ್ಟಿ
ಗುಲಾಬಿ ಬಣ್ಣದ ಡ್ರ್ಯಾಗನ್ ಹಣ್ಣು ನೋಡಲು ಎಷ್ಟು ಆಕರ್ಷಕವೋ, ಅದರ ಸೇವನೆಯಿಂದ ಅಷ್ಟೇ ಲಾಭಗಳನ್ನು ಪಡೆದುಕೊಳ್ಳಬಹುದು.
ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಗೆದ್ದು ನಾರಿನಂಶ ಹೇರಳವಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ ಅಮೂಲ್ಯ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಡ್ರ್ಯಾಗನ್ ಹಣ್ಣು ಸೋಂಕುಗಳಿಂದ ನಿಮ್ಮನ್ನು ದೂರವಿಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಡ್ರ್ಯಾಗನ್ ಹಣ್ಣು ಕಬ್ಬಿಣಾಂಶದ ಕೊರತೆಯನ್ನು ನಿವಾರಿಸುತ್ತದೆ. ಇದರಲ್ಲಿ ಮ್ಯಾಗ್ನಿಷಿಯಂ ಪ್ರಮಾಣವು ಅಧಿಕವಾಗಿರುವುದರಿಂದ ದೇಹದ ತೂಕ ಇಳಿಸುವವರಿಗೆ ಅತ್ಯುತ್ತಮ ಆಯ್ಕೆ. ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇದರಲ್ಲಿವೆ. ಇದರ ಬೀಜಗಳ ಸೇವನೆ ಒಳ್ಳೆಯದು.
ಮಾನಸಿಕ ಒತ್ತಡ, ಖಿನ್ನತೆ ಹಾಗೂ ಇತರ ತೊಂದರೆಗಳನ್ನು ಅನುಭವಿಸುತ್ತಿರುವವರು ನಿಯಮಿತವಾಗಿ ಈ ಹಣ್ಣನ್ನು ಸೇವಿಸುವುದರಿಂದ ಇವುಗಳಿಂದ ಹೊರಬರಬಹುದು. ಹೃದ್ರೋಗ ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲೀನ ಕಾಯಿಲೆಗಳನ್ನು ಗುಣಪಡಿಸುವ ಅಂಶ ಇದರಲ್ಲಿದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಮಧುಮೇಹಿಗಳು ಇದನ್ನು ಸೇವಿಸುವುದರಿಂದ ಸಕ್ಕರೆಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಸ್ವಲ್ಪ ಹುಳಿ ಹಾಗೂ ಸಿಹಿಯಾದ ರುಚಿಯನ್ನು ಹೊಂದಿರುವ ಇದು ಮಾರುಕಟ್ಟೆಯಲ್ಲಿ ಸಿಕ್ಕರೆ ಇಂದೇ ಮನೆಗೆ ತನ್ನಿ. ಮನೆಮಂದಿಯಲ್ಲಾ ಸೇವಿಸಿ.




