ಜಿಲ್ಲಾ ಸುದ್ದಿಬಾಗಲಕೋಟೆ
ಆತ್ಮಹತ್ಯೆಗೆ ಶರಣಾಗಿದ್ದ ನೇಕಾರನ ಮನೆಗೆ ಡಿಕೆಶಿ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

ಬಾಗಲಕೋಟೆ : ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ನೇಕಾರನ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ನೀಡಿ, ಸಾಂತ್ವನ ಹೇಳಿದರು.
ಬನಹಟ್ಟಿಯ ರಾಂಪುರ್ ನಲ್ಲಿ ನೇಕಾರ ಷಣ್ಮುಖಪ್ಪ ಮುರಗುಂಡಿ ಸಾಲಬಾಧೆ ತಾಳಲಾರದೆ ಈಚೆಗೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ನೇಕಾರರ ಮನೆಗೆ ಭೇಟಿ ನೀಡಿ, ಮಗ್ಗವನ್ನು ವೀಕ್ಷಿಸಿದರು.
ನೇಕಾರರೊಂದಿಗೆ ಸಂವಾದದ ಬಳಿಕ ನೇರವಾಗಿ ಆತ್ಮಹತ್ಯೆ ಮಾಡಿಕೊಂಡ ಷಣ್ಮುಖಪ್ಪ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ರಾಂಪುರ್ ನ ಶ್ರೀ ನೀಲಕಂಠೇಶ್ವರ ಮಠಕ್ಕೆ ಭೇಟಿ ನೀಡಿ ಶಿವಶಂಕರ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವೆ ಉಮಾಶ್ರೀ ಸಾಥ್ ನೀಡಿದ್ದರು.




