Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಗೆ ವಿಕೇಂಡ್ ಶಾಕ್ ನೀಡಿದ ಮಳೆರಾಯ

ಧಾರವಾ : ಕಳೆದ ಎರಡು ದಿನಗಳಿಂದ ಕೊಂಚ ಬೀಡುವು ನೀಡುದ ಮಳೆರಾಯ ಇಂದು ಮುಂಜಾನೇಯಿಂದಲ್ಲಿ ಅವಳಿನಗರದ ಜನತೆಗೆ ಮಳೆರಾಯ ಶಾಕ್ ನೀಡಿದ್ದು, ಬಿಟ್ಟು ಬೀಡದೆ ಮಳೆರಾಯ ಅರ್ಭಟಿಸುತ್ತಿದ್ದಾನೆ. ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಪೇಡಾನಗರಿ ಧಾರವಾಡದಲ್ಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಹು-ಧಾ ಅವಳಿನಗರದಲ್ಲಿ ಕಳೆದ ನಾಕೈದು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ಕಳೆದ ಶುಕ್ರವಾರ ಹಾಗೂ ಶನಿವಾರದಂದು ಮಳೆರಾಯ ಕೊಂಚ ಬೀಡವು ಮಾಡಿಕೊಟ್ಟಿತು. ಅಲ್ಲದೆ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಎರಡು ದಿನ ಸೂರ್ಯಕಿರಣ ಕಿರಣಗಳನ್ನು ನೋಡಿ ರಿಲ್ಯಾಕ್ಸ್ ಮಾಡಿಕೊಂಡಿದ್ದ ಅವಳಿನಗರ ಜನತೆಗೆ ವಿಕೆಂಡ್ ಸಂಡೇ ಖರೀದಿಗೆ ಬ್ರೆಕ್ ಹಾಕುವ ಮೂಲಕ ಶಾಕ್ ನೀಡಿದ್ದಾನೆ. ಮುಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನತೆ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಬೆಳ್ಳಂಬೆಳಗ್ಗೆ ಹಾಲು-ತರಕಾರಿ ತರಲು ಅವಕಾಶ ನೀಡದ ಮಳೆಯಿಂದ ಜನರು ಹೊರಗೆ ಬರದೇ ಪರದಾಟ ನಡೆಸಿರುವುದು ಒಂದೆಡೆಯಾದರೆ, ಸಂಡೇ ಜಾಲಿ ರೈಡ್ ಹೋಗವ ಯುವ ಸಮುದಾಯಕ್ಕೆ ಮಳೆರಾಯ ಶಾಕ್ ನೀಡಿದ್ದಾನೆ.

ನಿರಂತರವಾಗಿ ಸುರಿದ ಮಳೆಯಿಂದ ಅವಳಿನಗರದ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿರುವ ನಿವಾಸಿಗಳಲ್ಲಿ ಮಳೆಯ ಆತಂಕ ಎದುರಾಗಿದ್ದು, ರಸ್ತೆ ಬದಿಗಳಲ್ಲಿನ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾನೆ, ಮನೆಯೊಳಗೆ ಬಂದ ನೀರನ್ನು ಹೊರಹಾಕಲು ಜನರು ಪರದಾಟ ನಡೆಸಿದ್ದಾರೆ. ಇನ್ನೂ ಗಾಳಿ ಮಳೆಯಿಂದಾಗಿ ಧಾರವಾಡ ಕೋರ್ಟ್ ವೃತದ ಬಾಲ ಭವನ ಕಚೇರಿಯ ಮುಂಭಾಗದಲ್ಲಿ ಮರದ ರೆಂಬೆಯೊಂದು ಕಟ್ಟಾಗಿ ರಸ್ತೆಯ ಮೇಲೆ ಬಿದಿದ್ದು, ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿಗಳು ರೆಂಬೆ ತೆರವು ಮಾಡಿತ್ತಿದ್ದಾರೆ.

ಮಳೆರಾಯನ ಆಗಮನದಿಂದ ರೈತರ ಮೊಗದಲ್ಲಿ ಮಂದಾಸ

ಇನ್ನೂ ಅವಳಿ ನಗರ ಹೊರತ್ತುಪಡಿಸಿ ಗ್ರಾಮೀಣ ಭಾಗದಲ್ಲಿಯು ಉತ್ತಮವಾಗಿ ಮಳೆಯಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಮಳೆರಾಯ ಬಿಟ್ಟು ಬಿಟ್ಟ ಅರ್ಭಟಿಸುತ್ತಿದ್ದಾನೆ. ಇದರಿಂದಾಗಿ ಉತ್ತಮ ಮುಂಗಾರು ಬೆಳೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದು, ಮಳೆರಾಯನ ಆಗಮನದಿಂದ ರೈತರ ಮೊಗದಲ್ಲಿಗ ಮಳೆರಾಯ ಮಂದಹಾಸ ಮೂಡಿಸಿದ್ದಾನೆ.

Spread the love

Related Articles

Leave a Reply

Your email address will not be published. Required fields are marked *

Back to top button