Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಬಾಲಕಿಗೆ ಚಾಕಲೇಟ್ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಶಿಕ್ಷೆ

ಕಾರವಾರ : 2019 ರ ಜುಲೈನಲ್ಲಿ ತನ್ನ ಮನೆಯ ಸಮೀಪ ಕೂಲಿ ಕೆಲಸ ಮಾಡುವ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ, ಊಟ ಮಾಡಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣದ ಆರೋಪಿಗೆ ಇದೀಗ ಶಿಕ್ಷೆಯಾಗಿದೆ.

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಇಲ್ಲಿನ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಕಾರವಾರದ ಕೋಡಿ ಭಾಗದ ಸಾಯಿಕಟ್ಟಾ ನಿವಾಸಿ ವಿನೋದ್ ಬಾಬನಿ ನಾಯ್ಕ ಶಿಕ್ಷೆಗೊಳಗಾದ ಅಪರಾಧಿ.

2019 ರ ಜುಲೈನಲ್ಲಿ ತನ್ನ ಮನೆಯ ಸಮೀಪ ಕೂಲಿ ಕೆಲಸ ಮಾಡುವ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ,ಊಟ ಮಾಡಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ, ಪಾಲಕರು ದೂರು ನೀಡಿದ್ದರು. ಆಗಿನ ಡಿವೈಎಸ್ಪಿ ಶಂಕರ್ ಮಾರಿಹಾಳ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಶಿವಾಜಿ ನೆಲವಡೆ ಶಿಕ್ಷೆ ಪ್ರಕಟಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button