Breaking Newsರಾಷ್ಟ್ರೀಯ

ಕಂದಹಾರ್ ​ಸಂಘರ್ಷದಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವು

ಕಾಬೂಲ್: ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ಭದ್ರತಾ ಪಡೆ ಮತ್ತು ತಾಲಿಬಾನಿಗಳ ನಡುವೆ ನಡೆದ ಘರ್ಷಣೆಯ ವೇಳೆ ಭಾರತೀಯ ಫೊಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ(40) ಸಾವಿಗೀಡಾಗಿದ್ದಾರೆ.

ಸಿದ್ದಿಕಿ ರಾಯಿಟರ್ಸ್ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು. ಮುಂಬೈನಲ್ಲಿ ನೆಲೆಸಿದ್ದ ಅವರು, ಕಳೆದ ಕೆಲ ದಿನಗಳಿಂದ ಅಫ್ಘನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ನಡೆಯುತ್ತಿರುವ ಯುದ್ಧದ ವರದಿ ಮಾಡಲು ತೆರಳಿದ್ದರು.

ಗುರುವಾರ ರಾತ್ರಿ ಕಂದಹಾರ್​ನಲ್ಲಿ ನಡೆದ ಘರ್ಷಣೆ ವೇಳೆ ಸಿದ್ದಿಕಿ ಸಾವನ್ನಪ್ಪಿದ್ದಾರೆ.

ದೆಹಲಿಯಲ್ಲಿ ಓದಿದ್ದ ಅವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಬಳಿಕ ಮಾಸ್ ಕಮ್ಯುನಿಕೇಷನ್​ನಲ್ಲೂ ಪದವೀಧರರರಾಗಿ, ಟೀವಿ ವರದಿಗಾರಿಕೆಯೊಂದಿಗೆ ವೃತ್ತಿ ಆರಂಭಿಸಿದ್ದರು. ಅನಂತರ ಫೋಟೋ ಜರ್ನಲಿಸ್ಟ್ ಆಗಿ ವೃತ್ತಿ ಬದಲಿಸಿದ್ದ ಅವರು, ರಾಯಿಟರ್ಸ್ ಸಂಸ್ಥೆ ಸೇರಿದ್ದರು.

ರೋಹಿಂಗ್ಯಾ ನಿರಾಶ್ರಿತರ ದುಸ್ಥಿತಿಯನ್ನು ತೋರಿಸಿದ್ದ ಚಿತ್ರಕ್ಕಾಗಿ 2018ರಲ್ಲಿ ಅವರು ಪುಲಿಟ್ಷರ್ ಪ್ರಶಸ್ತಿ ಪಡೆದಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button