ಮೈಸೂರು

ಹಲ್ಲೆ ಆರೋಪ ವಿಚಾರ; ದಿ ಪ್ರಿನ್ಸ್ ಹೊಟೇಲ್​ನಲ್ಲಿ ಪೊಲೀಸರಿಂದ ಪರಿಶೀಲನೆ

ಮೈಸೂರು: ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ನಲ್ಲಿ ವೇಯ್ಟರ್‌ ಮೇಲೆ ನಟ ದರ್ಶನ್‌ ಹಲ್ಲೆ ನಡೆಸಿದ್ದರು ಎಂಬ ಇಂದ್ರಜಿತ್‌ ಲಂಕೇಶ್‌ ಆರೋಪ ಆಧರಿಸಿ ಶುಕ್ರವಾರ ಬೆಳಗ್ಗೆ ಪೊಲೀಸರು ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದರು.

ಹೋಟೆಲ್‌ನಲ್ಲಿ ಸಂದೇಶ್‌ ಅವರು ಕೂಡ ಇದ್ದರು. ಸಂದೇಶ್‌ ಹಾಗೂ ಹೊಟೇಲ್‌ ಸಿಬ್ಬಂದಿಯಿಂದ ಘಟನೆ ಸಂಬಂಧ ಪೊಲೀಸರು ಮಾಹಿತಿ ಸಂಗ್ರಹಿಸಿದರು.
ಇದೇ ವೇಳೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಯಿತು. ಹಲ್ಲೆಗೊಳಗಾಗಿದ್ದರು ಎನ್ನಲಾಗುತ್ತಿರುವ ವೇಟರ್‌ ಗಂಗಾಧರ್‌ ಅವರನ್ನೂ ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಜನಪ್ರಿಯ ನಟ ಹಾಗೂ ಆತನ ಸ್ನೇಹಿತರು ಹೊಟೇಲ್‌ನಲ್ಲಿ ವೇಯ್ಟರ್‌ ಮೇಲೆ ಹಲ್ಲೆ ನಡೆಸಿದ್ದರು. ಆದರೂ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ನಿರ್ಮಾಪಕ ಇಂದ್ರಜಿತ್‌ ಲಂಕೇಶ್‌ ಗುರುವಾರ ಗಂಭೀರ ಆರೋಪ ಮಾಡಿ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮೈಸೂರು ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವರು ಸೂಚನೆ ನೀಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button