ನೆನಪಿನ ಪುಟ ಸೇರಿದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ

ಹುಬ್ಬಳ್ಳಿ: ಕಳೆದ ಮೂರುವರೆ ದಶಕಗಳಿಂದ ವಾಣಿಜ್ಯಗರಿ ಹುಬ್ಬಳ್ಳಿಯ ಹಾಟಸ್ಪಾಟ್ ಎಂದೇ ಕರೆಯಿಸಿಕೊಳ್ಳುತ್ತಿದ್ದ, ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಹಳೇ ಬಸ್ ನಿಲ್ದಾಣವು ಈಗ ನೆನಪಿನ ಪುಟ ಸೇರಿಕೊಂಡಿದೆ.
ಇದರೊಂದಿಗೆ, 33 ವರ್ಷಗಳಿಂದ ಹುಬ್ಬಳ್ಳಿ ಆಕರ್ಷಣೆಯಾಗಿದ್ದ ಕೇಂದ್ರವೊಂದು ಇಲ್ಲವಾದಂತಾಗಿದೆ. ಹಲವಾರು ಜನರ ಭಾವನೆಯ ಬೀಡಾಗಿದ್ದ ಹಳೆ ಬಸ್ ನಿಲ್ದಾಣ ಈಗ ಹೊಸ್ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ನೆನಪಿನ ಪುಟಕ್ಕೆ ಜಾರಿದೆ.
35 ಕೋಟಿ ರೂ. ವೆಚ್ಚದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ, ಈಗ ನಿರ್ಮಾಣವಾಗಲಿರುವ ಹಳೆ ಬಸ್ ನಿಲ್ದಾಣ, ಜಿ+2 ಮಾದರಿಯಲ್ಲಿ ಹೈಟೆಕ್ ಬಸ್ ನಿಲ್ದಾಣವಾಗಿ ಎಲ್ಲಾ ಪ್ರಯಾಣಿಕರ ಅನುಕೂಲಕರವಾಗಲಿದೆ. ಇನ್ನು ಈ ಬಸ್ ನಿಲ್ದಾಣದಲ್ಲಿ, ಬಿಆರ್ ಟಿಎಸ್ ನಿಲುಗಡೆಗೆ ಪ್ಲಾಟ್ ಫಾರಂ, ಮಹಿಳಾ ಮತ್ತು ಪುರುಷರಿಗೆ ಶೌಚಾಲಯ, ಸ್ಟಾಫ್ ರೂಂ, ಪ್ರಥಮ ಚಿಕಿತ್ಸಾ ಕೊಠಡಿ, ಸೇರಿದಂತೆ ಇಲ್ಲಿ ಪ್ರಯಾಣಿಕರ ಸೌಲಭ್ಯ ದೊರಕಲಿದೆ, ಆದಷ್ಟು ಬೇಗ ಕಾಮಗಾರಿ ಮುಗಿಯುವ ಮುನ್ಸೂಚನೆ ಅಧಿಕಾರಿಗಳು ನೀಡಿದ್ದು, ಸದ್ಯ ಕೆಲವೊಂದು ಪ್ರಯಾಣಿಕರಲ್ಲಿ ಬಸ್ ಬಗ್ಗೆ ಗೊಂದಲ ಸೃಷ್ಟಿಯಾಗುತ್ತಿದೆ. ಕೂಡಲೆ ಕಾಮಗಾರಿ ಪೂರ್ಣಗೊಳಿಸಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣವಾಗಲಿ ಎಂಬುದೇ ಸಾರ್ವಜನಿ ಒತ್ತಾಯವಾಗಿದೆ.
ಮೂರುವರೆ ದಶಕಗಳ ರಾಜ್ಯದ ಬೇರೆ ಬೇರೆ ಜಿಲ್ಲೆ ಸೇರಿದಂತೆ ಹುಬ್ಬಳ್ಳಿಗರ ಹಾಟ್‌ಸ್ಪಾಟ್ ಆಗಿದ್ದ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣವು ಬುಧವಾರ ನೆಲಸಮಗೊಂಡಿದ್ದು, ಈಗ ಬಸ್ ನಿಲ್ದಾಣ ಕಟ್ಟಡ ಇತಿಹಾಸ ಪುಟ ಸೇರಿದೆ. ಇನ್ನು ಬಸ್ ನಿಲ್ದಾಣ ಬಗ್ಗೆ ಸಾರ್ವಜನಿಕರು ಪ್ರಯಾಣಿಕರು ಮೆಚ್ಚುಗೆ ಜೊತೆಗೆ ಸವಿನೆನಪಿನ ವಿಚಾರ ಹಂಚಿಕೊಂಡಿದ್ದು ವಿಶೇಷವಾಗಿದೆ.




