Latestಚಿಕ್ಕಮಗಳೂರು

ತುಂಗಾನದಿ ಬಳಿ ಜಿಂಕೆಗಳ ಒಗ್ಗಟ್ಟು ಪ್ರದರ್ಶನ!

ಚಿಕ್ಕಮಗಳೂರು: ಜಿಂಕೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ವಿರಳವಾಗಿರುವಾಗ ಕೊಪ್ಪ ತಾಲೂಕಿನ ಹರಿಹರಪುರದ ಜಂಬಿಟ್ಟಿಗೆ ತುಂಗಾನದಿ ತೀರದಲ್ಲಿ ಒಟ್ಟೊಟ್ಟಿಗೇ ಒಂದೇ ದಾರಿಯಲ್ಲಿ ಓಡಾಡುತ್ತ ತಮ್ಮ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.

ತುಂಗಾನದಿ ತೀರದಲ್ಲಿ ಜಿಂಕೆಗಳು ಬದುಕಲು ಸೂಕ್ತ ವಾತಾವರಣವಿದೆ. ದಟ್ಟವಾಗಿ ಬೆಳೆದ ಬಿದಿರು ತೋಪುಗಳು, ತಿನ್ನಬಹುದಾದ ಮೇವು, ಕುಡಿಯಲು ನದಿನೀರು ಇರುವುದರಿಂದ ಜಿಂಕೆಗಳ ವಾಸಕ್ಕೆ ಈ ಪ್ರದೇಶ ಯೋಗ್ಯವಾಗಿದೆ. ಅಪರೂಪಕ್ಕೊಮ್ಮೆ ಹೀಗೆ ನದಿತೀರದಲ್ಲಿ ಸಾಗುತ್ತ ನೋಡುಗರ ಕಣ್ಮನ ಸೆಳೆಯುತ್ತವೆ.

Spread the love

Related Articles

Leave a Reply

Your email address will not be published. Required fields are marked *

Back to top button