Breaking Newsಜಿಲ್ಲಾ ಸುದ್ದಿಬೆಳಗಾವಿ

ಹೆದ್ದಾರಿಯಲ್ಲಿ ಲಾರಿ ಪಲ್ಟಿ ಹೊಡೆದು ಇಬ್ಬರ ದಾರುಣ ಸಾವು

ಬೆಳಗಾವಿ: ಕಾಕತಿ ಬಳಿಯ ವಂಟಮೂರಿ ಘಾಟ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ‌.

ಲಾರಿಯೊಂದು ಡಿವೈಡರ್ ಜಂಪ್ ಮಾಡಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಎರಡು ಲಾರಿಗಳಿಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಈ ಅಪಘಾತದಲ್ಲಿ ಒಟ್ಟು ಮೂರು ಲಾರಿಗಳು ಚಿಂದಿಯಾಗಿವೆ.

ಉತ್ತರ ಪ್ರದೇಶದ ನೀರಜ್, ಮಹಾರಾಷ್ಟ್ರ ಬೀಡ ಜಿಲ್ಲೆಯ ರಾಜೇಂದ್ರ ದೋಹಿಪಡೆ ಎಂಬಾತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ವಂಟಮೂರಿ ಘಾಟ್ ಇಳಿಜಾರಿನಿಂದ ಜೋರಾಗಿ ಬಂದ ಲಾರಿ ನಿಯಂತ್ರಣ ತಪ್ಪಿ, ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ನಿಂತಿದ್ದ ಎರಡು ಲಾರಿಗಳಿಗೆ ಅಪ್ಪಳಿಸಿದ ಕಾರಣ ಈ ಭೀಕರ ಅಪಘಾತ ಸಂಭವಿಸಿದ್ದು ರಸ್ತೆಯಲ್ಲಿ ಲಾರಿಗಳ ಬಿಡಿಬಾಗಗಳು ಚಿಲ್ಲಾಪಿಲ್ಲಿಯಾಗಿವೆ.

ತಡರಾತ್ರಿ ಸ್ಥಳಕ್ಕೆ ಧಾವಿಸಿದ ಕಾಕತಿ ಪೋಲೀಸರು ತಕ್ಷಣ ವಾಹನಗಳನ್ನು ತೆರವು ಮಾಡಿ, ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ಅನಕೂಲ ಮಾಡಿದ್ದಾರೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ‌.

Spread the love

Related Articles

Leave a Reply

Your email address will not be published. Required fields are marked *

Back to top button